ಉಳ್ಳಾಲ: ಎಸ್ ಎಸ್ ಎಫ್ ನಿಂದ ‘ಮುಲಾಖಾತ್ ಕ್ಯಾಂಪ್’

Update: 2016-08-22 14:16 GMT

ಮಂಗಳೂರು, ಆ. 22: ಎಸೆಸೆಫ್ ಎಂಬುದು ಮಾದರಿ ಸಂಘಟನೆಯಾಗಿದೆ ಎಂದು ಮಳ್ಹರ್ ದಅ್ವಾ ಕಾಲೇಜಿನ ಪ್ರಾಂಶುಪಾಲ ಅನಸ್ ಸಖಾಫಿ ಸಿದ್ದೀಖಿ ಶಿರಿಯ ಹೇಳಿದ್ದಾರೆ.

ಅವರು ಎಸೆಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಹಮ್ಮಿಕೊಂಡ ‘ಮುಲಾಖಾತ್ ಕ್ಯಾಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಸೆಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಖಿರಾಅತ್ ಪಠಿಸಿದರು. ಸೆಕ್ಟರ್ ಉಪಾಧ್ಯಕ್ಷ ವೌಲಾನ ನವಾಝ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು. ಡಿಕೆಎಸ್ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮಿಕ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಇಶಾ’ ಇದರ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ಹಾಗೂ ಎಸೆಸೆಫ್ ಉಳ್ಳಾಲ ಡಿವಿಶನ್‌ನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸೆಸೆಫ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಹಾಜಿ ರಿಲೀಫ್ ಫೌಂಡೇಶನ್‌ನ ಚಾರಿಟಿ ಬಾಕ್ಸ್ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ, ರಿಲೀಫ್‌ನ ಕೋಶಾಧಿಕಾರಿ ಫಾರೂಖ್ ಹಿಬ, ಇಶಾರ ಕಾರ್ಯದರ್ಶಿ ಅಬ್ದುಲ್ ಘನಿ ಹಾಗೂ ರೀಡ್ ಪ್ಲಸ್‌ನ ಕಾರ್ಯನಿರ್ವಾಹಕ ಹನೀಫ್, ಅಲ್ ಅಮೀನ್ ರಿಲೀಫ್ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಹಳೆಕೋಟೆ, ಮುಕ್ಕಚ್ಚೇರಿ ಮಸೀದಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಮುಕ್ಕಚ್ಚೇರಿ, ಉಳ್ಳಾಲ ಡಿವಿಷನ್‌ನ ಉಪಾಧ್ಯಕ್ಷ ಮುಸ್ತಫಾ ಮಾಸ್ಟರ್ ಉಳ್ಳಾಲ, ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಾಗೂ ಶಬೀರ್ ಪೇಟೆ, ಸೆಕ್ಟರ್ ಕಾರ್ಯದರ್ಶಿಗಳಾದ ಸಿರಾಜ್ ಮೇಲಂಗಡಿ, ಹಫೀಝ್ ಕೋಡಿ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೋಟೆಪುರ, ಎಸ್‌ಬಿಎಸ್‌ನ ನಿರ್ದೇಶಕ ಅಹ್ಸನ್ ಒಂಭತ್ತುಕೆರೆ, ತೌಸೀಫ್ ಒಂಭತ್ತುಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೆಕ್ಟರ್‌ನ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News