ತಲಪಾಡಿ-ಕಾಲಿಕಡವು ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕೆ ಹಸಿರು ನಿಶಾನೆ

Update: 2016-08-22 18:11 GMT

ಕಾಸರಗೋಡು, ಆ.22: ತಲಪಾಡಿ ಯಿಂದ ಕಾಲಿಕಡವು ತನಕದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕೆ ಕೊನೆಗೂ ಹಸಿರು ನಿಶಾನೆ ಲಭಿಸಿದ್ದು, ಮಾರ್ಚ್‌ನಿಂದ ಕಾಮಗಾರಿ ಆರಂಭಗೊಳ್ಳಲಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳ ಅವಲೋಕನಾ ಸಭೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಕ್ರಿ ಯೆಯನ್ನು ಚುರುಕುಗೊಳಿಸುವಂತೆ ರಾಜ್ಯ ಲೋಕೋಪಯೋಗಿ ಇಲಾ ಖೆಯ ಮುಖ್ಯ ಕಾರ್ಯದರ್ಶಿ ಸುಬ್ರತೊ ಬಿಸ್ವಾಸ್ ಈ ವೇಳೆ ಆದೇಶ ನೀಡಿದ್ದಾರೆ.
     ಉತ್ತರ ಕೇರಳದ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅನಿ ವಾರ್ಯವಾಗಿದೆ. ಯೋಜನೆ ಅಂತಿಮ ವರದಿಯನ್ನು ಸೆಪ್ಟಂಬರ್ 30ರೊಳಗೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಆದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 80 ಶೇ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 69 ಹೆಕ್ಟೇರ್ ಭೂಮಿಯನ್ನು ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ 28 ಹೆಕ್ಟೇರ್ ಜಮೀನಿನ ಸರ್ವೇ ಪ್ರಕ್ರಿಯೆಗೆ ಅಧಿಸೂಚನೆ ಸಿದ್ಧಪಡಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ನಷ್ಟ ಪರಿಹಾರ ನೀಡಿ ಈ ಕುರಿತ ಗೊಂದಲವನ್ನು ಡಿಸೆಂಬರ್ 31 ರೊಳಗೆ ಪರಿಹರಿಸುವ ಗುರಿ ಹೊಂದಲಾಗಿದೆ. 2017ರ ಮಾರ್ಚ್ ನಲ್ಲಿ ಚತುಷ್ಪಥ ಕಾಮಗಾರಿ ಆರಂಭಿ ಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
  ಜಿಲ್ಲೆಯಲ್ಲಿ ತೀವ್ರಗೊಂಡಿರುವ ಸಂಚಾರ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅತೀ ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಹೇಳಿದರು.
 ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಕೆ.ಅಂಬುಜಾಕ್ಷನ್, ಉಪಜಿಲ್ಲಾಧಿಕಾರಿ ಎಂ.ಸಿ. ಸುಕುಮಾರನ್, ಹೆದ್ದಾರಿ ಸಹಾ ಯಕ ಇಂಜಿನಿಯರ್ ಪಿ.ಕೆ.ಮಿನಿ, ಅಧಿಕಾರಿಗಳಾದ ವಿ.ರವಿ, ಎಂ. ಪ್ರದೀಪನ್, ಪ್ರಿನ್ಸ್ ಪ್ರಭಾಕರನ್, ಕೆ.ಮನೋರಂಜನ್, ಎ.ಪಿ.ಇಮ್ತಿಯಾಝ್, ಸಿ.ಸುರೇಶ್, ಕೆ.ಸೇತುಮಾಧವನ್ ನಾಯರ್, ಬಿನು ಮ್ಯಾಥ್ಯೂ ಪಣಿಕ್ಕರ್, ಬಿ.ಎಂ.ಜಾರ್ಜ್, ಬಿ.ಸುಧಾಕರನ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News