‘ನಗರದಲ್ಲಿ ಶ್ರೀನಿವಾಸ್ ಮಲ್ಯ ವೃತ್ತ- ಪ್ರತಿಮೆ ನಿರ್ಮಾಣ’

Update: 2016-08-23 18:24 GMT

ಮಂಗಳೂರು, ಆ.23: ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ ಯು.ಶ್ರೀನಿವಾಸ ಮಲ್ಯ ಅವರ ಹೆಸರಿನಲ್ಲಿ ವೃತ್ತ ಹಾಗೂ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದರು. ದ.ಕ. ಜಿಲ್ಲಾಕಾರಿ ಕಚೇರಿಯಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ ಮಾತನಾಡಿ, ಶ್ರೀನಿವಾಸ ಮಲ್ಯ ಮಂಗಳೂರು ನಗರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ನೆನಪಿನಲ್ಲಿ ವೃತ್ತ ಹಾಗೂ ಪ್ರತಿಮೆ ನಿರ್ಮಾಣ ಮಾಡುವಂತೆ ಪಾಲಿಕೆಗೆ ಮನವಿ ಮಾಡಲಾಗಿತ್ತು. ಪಡೀಲ್‌ನಲ್ಲಿ ಇದಕ್ಕಾಗಿ ಸ್ಥಳ ಗೊತ್ತುಪಡಿಸಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಬದಲಾವಣೆ ಆಯಿತು. ಹೀಗಾಗಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಒದಗಿಸುವಂತೆ ಅವರು ಮನವಿ ಮಾಡಿದರು.

ಈ ಬಗ್ಗೆ ಮಾತನಾಡಿದ ಸಚಿವ ರೈ ಅವರು, ಸರ್ಕ್ಯೂಟ್‌ಹೌಸ್ ಮುಂಭಾಗದ ಸರ್ಕಲ್‌ನಲ್ಲಿ ವೃತ್ತ ನಿರ್ಮಾಣ ಹಾಗೂ ಪ್ರತಿಮೆ ಸ್ಥಾಪನೆಗೆ ಅವಕಾಶವಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಪೂರಕ ಪ್ರಕ್ರಿಯೆಗಳನ್ನು ಕೈಗೊಳ್ಳಿ ಎಂದರು.
 
* ನೆಹರೂ ಪ್ರತಿಮೆಗೆ ಟೆಂಡರ್: ನಗರದ ನೆಹರೂ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಾಜಿ ಪ್ರಧಾನಿ ದಿ. ಜವಾಹರ ಲಾಲ್ ನೆಹರೂ ಅವರ 7 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮನಪಾದ ಸಾಮಾನ್ಯ ನಿಯಡಿ 12.40 ಲಕ್ಷ ರೂ. ವೆಚ್ಚದಲ್ಲಿ ಗುತ್ತಿಗೆದಾರರಿಗೆ ಆದೇಶ ನೀಡಲಾಗುವುದು ಎಂದು ಸಭೆಯಲ್ಲಿ ಅಕಾರಿಗಳು ತಿಳಿಸಿದರು. ಸಭೆಯಲ್ಲಿ ಚರ್ಚೆಗೊಂಡ ಇತರ ಪ್ರಮುಖ ವಿಷಯಗಳು
ಉಳ್ಳಾಲದಲ್ಲಿ 41 ಸೆಂಟ್ಸ್ ಜಾಗದಲ್ಲಿ 5 ಕೋ.ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ. 
 ಸುರತ್ಕಲ್‌ನಲ್ಲಿ ಶ್ರೀನಿವಾಸ ಮಲ್ಯ ಸ್ಮಾರಕ ಭವನದ ಮುಂದುವರಿದ ಕಾಮಗಾರಿಗೆ 1 ಕೋ.ರೂ. ಬೇಡಿಕೆ. 
ವಿಟ್ಲ ಒಕ್ಕೆತ್ತೂರು ಸೇತುವೆ ಬಳಿ 10 ಸೆಂಟ್ಸ್ ಜಾಗದಲ್ಲಿ ‘ಗಡಿ ಭವನ’ ನಿರ್ಮಾಣದ ಸ್ಥಳ ಪರಿಶೀಲನೆ
ಎಮ್ಮೆಕೆರೆಯಲ್ಲಿ ‘ಅಂತಾರಾಷ್ಟ್ರೀಯ ಈಜುಕೊಳ’ ಒಪ್ಪಿಗೆ ಪ್ರಕ್ರಿಯೆ ಪೂರ್ಣಗೊಳಿಸಲು 1 ತಿಂಗಳ ಗಡುವು
ಎಂಡೋಪೀಡಿತರಿಗೆ 4 ಮೊಬೈಲ್ ಯುನಿಟ್ ಸೇವೆ ಆರಂಭ
ಪಂಪ್‌ವೆಲ್‌ನಲ್ಲಿ ಖಾಸಗಿ ಬಸ್ಸು ನಿಲ್ದಾಣಕ್ಕೆ ಸಂಬಂಸಿ ನೂತನ ಜಿಲ್ಲಾಕಾರಿ ಕೆ.ಜಿ. ಜಗದೀಶ್‌ರಿಂದ ಆ. 27ರಂದು ಸ್ಥಳ ಪರಿಶೀಲನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News