ಪುತ್ತೂರು: ಮದದ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

Update: 2016-08-24 06:31 GMT

ಪುತ್ತೂರು, ಆ.24: ಯುವಜನತೆ ಸ್ವಾರ್ಥರಹಿತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಅಸಹಾಯಕರ ಧ್ವನಿಯಾಗಿರಬೇಕು ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್ ಹೇಳಿದ್ದಾರೆ.

ಪುತ್ತೂರು ಮದದ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಮದದ್ ಚಾರಿಟೇಬಲ್ ಟ್ರಸ್ಟ್ ಯಾವುದೇ ಧರ್ಮ, ಜಾತಿ, ಪಂಗಡ, ರಾಜಕೀಯ ಪಕ್ಷವನ್ನು ಪರಿಗಣಿಸದೆ ಕೇವಲ ಬಡವರ, ದುರ್ಬಲರ ಆಶಾಕಿರಣವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಉಪ್ಪಿನಂಗಡಿ ಜುಮಾ ಮಸೀದಿ ಅಧ್ಯಕ್ಷ, ಟ್ರಸ್ಟ್ ಸಂಚಾಲಕ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ಸಂಪ್ಯ ಎಂಜೆಎಂ ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ, ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ನರೇಂದ್ರ ರೈ ದೇರ್ಲ, ಸುಳ್ಯ-ಗಾಂಧಿನಗರ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಹಾಲಿಂಗ ಭಟ್, ಸವಣೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ, ಪಂಚಾಯತ್‌ರಾಜ್ ಸಂಪನ್ಮೂಲ ವ್ಯಕ್ತಿ ಮುಹಮ್ಮದ್ ಬಡಗನ್ನೂರು, ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ವಿನ್ಸೆಂಟ್ ಮಸ್ಕರೇನ್ಹಸ್, ಅಲ್ ಮಜ್‌ಮಾ ಗ್ರೂಪ್‌ನ ಹಸೈನಾರ್ ಕೊಡಿಪ್ಪಾಡಿ, ನ್ಯಾಯವಾದಿ ಗ್ರೆಗೋರಿ ಡಿಸೋಜ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಲತೀಫ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಟ್ರಸ್ಟ್‌ನ ವಿವಿಧ ಪದಾಧಿಕಾರಿಗಳಾದ ಹಂಝ ನಂದಿನಿ ದರ್ಬೆ, ಝೈದ್ ಪೆರಿಯಡ್ಕ, ಆಸಿಪ್ ಕೆ.ಎಸ್. ಕಬಕ, ಉಬೈದುಲ್ಲಾ ವಿಟ್ಲ ಬಜಾರ್, ಡಾ. ಶಾಫಿ ದರ್ಬೆ, ಸಾದಿಕ್ ಅಲಿ ಸಂಪ್ಯ, ಜಬ್ಬಾರ್ ಸಂಪ್ಯ, ಅಶ್ರಪ್ ಪರ್ಲಡ್ಕ, ಅಬೂಬಕ್ಕರ್ ಕಲ್ಲರ್ಪೆ, ಹಂಝ ಬೀಟಿಗೆ, ನಾಸಿರ್ ಇಡಬೆಟ್ಟು, ನ್ಯಾಯವಾದಿ ಅಶ್ರಫ್ ಕೆಂಪಿ, ಅಶ್ರಫ್ ಸಂಪ್ಯ, ಅಬ್ದುಲ್ಲತೀಫ್ ಉರುವಾಲ್‌ಪದವು, ಫಾರೂಕ್ ಅಮ್ಮುಂಜೆ, ಎ.ಬಿ. ಮೊದಿನ್ ಬೆಳ್ಳಾರೆ, ಮುಸ್ತಫಾ ಇಡಬೆಟ್ಟು, ಹಾರೂನ್ ಸಂಪ್ಯ, ಜಾಫರ್ ವಿಟ್ಲ, ಬಶೀರ್ ವಾಗ್ಲೆ, ಖಲಂದರ್ ಅಮ್ಮುಂಜೆ, ಅನ್ಸಾರ್ ಗಡಿಯಾರ, ಮುಹಮ್ಮದ್ ಬಾತಿಶ ನೆಕ್ಕರೆ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಟ್ರಸ್ಟ್ ವತಿಯಿಂದ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ಗೌರವಾಧ್ಯಕ್ಷ ಪ್ರೊ. ಜುಬೈರ್ ವಿಟ್ಲ ಸ್ವಾಗತಿಸಿ, ಅಧ್ಯಕ್ಷ ಅಬ್ದುಲ್ ಸಮದ್ ನೆಕ್ಕರೆ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಎಚ್. ಫಾರೂಕ್ ಸಂಟ್ಯಾರ್ ವಂದಿಸಿದರು. ನೌಫಲ್ ಕುಡ್ತಮುಗೇರು ಹಾಗೂ ಅಝೀಝ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News