ಕಾಸರಗೋಡು: ಮಟ್ಕಾನಿರತರಾಗಿದ್ದ 11 ಮಂದಿಯ ಬಂಧನ

Update: 2016-08-24 08:33 GMT

ಕಾಸರಗೋಡು, ಆ.24: ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇದರಂತೆ ಜಿಲ್ಲೆಯಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 24,460 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ಕಾಸರಗೋಡಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರು ಮಂದಿ ಹಾಗೂ ಕುಂಬಳೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐದು ಮಂದಿ ಸೆರೆಯಾಗಿದ್ದಾರೆ.

ಕಾಸರಗೋಡು ಹೊಸಬಸ್ಸುನಿಲ್ದಾಣ ಸಮೀಪ ಮಟ್ಕಾ ನಿರತರಾಗಿದ್ದ ಅಡ್ಕತ್ತಬೈಲು ನಿವಾಸಿ ಕೆ. ಆರ್. ಗಣೇಶ್(43), ಬದಿಯಡ್ಕ ಕುಡುಪಂಗುಳಿಯ ಮುಹಮ್ಮದ್ ಕುಂಞಿ(32), ಕುಂಜತ್ತೂರಿನ ಅರುಣ್(34), ಮೊಗ್ರಾಲ್ ಪುತ್ತೂರು ಪಂಜದಗುಡ್ಡೆಯ ಮುಹಮ್ಮದ್ ನವಾಝ್ (29), ಬೀರಂತಬೈಲಿನ ವಸಂತ(35), ಕಾಸರಗೋಡು ಅಶ್ವಿನಿನಗರದ ಜೀವನ್(29) ಬಂಧಿತ ಆರೋಪಿಗಳು. ಕಾಸರಗೋಡು ಸಿಐ ಅಬ್ದುರ್ರಹೀಂ, ಎಸ್ಸೈ ವರುಣ್ ಜೆ. ಕೃಷ್ಣನ್ ಕಾರ್ಯಾಚರಣಾ ತಂಡದಲ್ಲಿದ್ದರು.

ಕುಂಬಳೆಯಲ್ಲಿ ಎಸ್ಸೈ ಮೆಲ್ವಿನ್ ಜೋಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಶೇಡಿಕಾವಿನ ಶ್ರೀಧರನ್(42), ನೆಲ್ಲಿಕುಂಜೆಯ ಮನೋಜ್(34), ಪೆರುವಾಡ್‌ನ ನಾರಾಯಣ(50), ಜಯಕರ(45), ನಾಯ್ಕಾಪಿನ ಜಗನ್ನಾಥ(31) ಎಂಬವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ 1998ರ ಲಾಟರಿ ರೆಗ್ಯುಲೆಶನ್ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಲು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗಳಿಗೆ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುವುದು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಇಂತಹ ಪ್ರಕರಣಗಳಲ್ಲಿ ನಿರತರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News