ವಿದೇಶಿ ಮದ್ಯ ಅಕ್ರಮ ಸಾಗಾಟ: ಓರ್ವನ ಸೆರೆ

Update: 2016-08-24 18:08 GMT

 ಕಾಸರಗೋಡು, ಆ.24: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1,496 ಬಾಟ್ಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿರುವ ಹೊಸದುರ್ಗ ಅಬಕಾರಿ ದಳದ ಸಿಬ್ಬಂದಿಯೋರ್ವನನ್ನು ಬಂಧಿಸಿದ್ದಾರೆ.
 ಬಂಧಿತನನ್ನು ಮೈಲಾಟಿಯ ವಿನೋದ್ ಕುಮಾರ್(26) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಪೊಯಿನಾಚಿ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಎರಡು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಮದ್ಯ ಪತ್ತೆಯಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿ ಸಿಕೊಂಡಿದ್ದಾರೆ.
ಕಾರಿನ ನಂಬರ್ ನಕಲಿ ಎಂದು ಶಂಕಿಸಲಾಗಿದೆ. ಮಾಹೆಯಿಂದ ಮದ್ಯವನ್ನು ಕಾಸರಗೋಡು ಕಡೆಗೆ ಸಾಗಾಟ ಮಾಡುತ್ತಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News