ರಾಕ್ಣೊಗೆ ಸನ್ಮಾನ: ‘ಕೊಂಕಣಿ ಮಾನ್ಯತೆ ದಿವಸ’ಆಚರಣೆ

Update: 2016-08-25 18:45 GMT

ಮಂಗಳೂರು, ಆ.25: 80 ವರುಷಗಳ ಇತಿಹಾಸವಿರುವ ರಾಕ್ಣೊ ಕೊಂಕಣಿ ವಾರ ಪತ್ರಿಕೆಯನ್ನು ‘ಕೊಂಕಣಿ ಮಾನ್ಯತೆ ದಿವಸ್’ 2016 ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಪಿಂಗಾರ ಪತ್ರಿಕೆ, ಮಿಲಾಗ್ರಿಸ್‌ಕಾಲೇಜು ಕೊಂಕಣಿ ಸಂಘ ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೊಯ್ ಕಾಸ್ತೆಲಿನೊ ಮಾತನಾಡಿದರು. ಕವಿ ಲೋಯ್ಡೆ ರೇಗೊ, ಮಹೇಶ್ ಆರ್. ನಾಯಕ್ ಹಾಗೂ ರೇಮಂಡ್ ಡಿಕುನ್ಹಾ ಕವಿಗೋಷ್ಠಿ ನಡೆಸಿದರು. ಫೊರ್‌ವಿಂಡ್ಸ್‌ನ ನಿರ್ದೇಶಕರಾದ ಇ. ಫೆರ್ನಾಂಡಿಸ್, ಕೊಂಕಣಿ ಸಂಘದ ಮುಖ್ಯಸ್ಥೆ ಶಮಿತಾ, ಪ್ಲೊರಾ ಕ್ಯಾಸ್ತೆಲಿನೊ ಉಪಸ್ಥಿತರಿದ್ದರು. ಮಿಲಾಗ್ರಿಸ್ ಪ್ರಾಂಶುಪಾಲ ಫಾ. ಮೈಕಲ್ ಸಾಂತುಮಾಯೆರ್ ಸ್ವಾಗತಿಸಿದರು. ರೇಮಂಡ್ ಡಿಕುನ್ಹಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News