ತೊಕ್ಕೊಟ್ಟು: ಎಸ್ಸೆಸ್ಸೆಫ್ ವತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ

Update: 2016-08-27 16:16 GMT

ಉಳ್ಳಾಲ, ಆ.27: ಎಲ್ಲಾ ರೀತಿಯ ರಿಲೀಫ್ ಕಾರ್ಯದಲ್ಲಿ ತೊಡಗಿದ ಎಸ್ಸೆಸ್ಸೆಪ್ ತೊಕ್ಕೊಟ್ಟು ಸೆಕ್ಟರ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದ ಸಂಘಟನೆಯಾಗಿದೆ ಎಂದು ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಶುಕ್ರವಾರ ಪಂಪ್‌ವೆಲ್‌ನ ತಕ್ವ ಮಸೀದಿ ವಠಾರದಲ್ಲಿ ನಡೆದ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಮಳ್‌ಹರ್ ವಿದ್ಯಾ ಸಂಸ್ಥೆಯ ಶಿಲ್ಪಿ ಮರ್‌ಹೂಂ ಅಸೈಯದ್ ಪೋಸೋಟ್ ತಂಙಳ್‌ರ ಸ್ಮರಣಾರ್ಥ ನಡೆದ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ತೊಕ್ಕೊಟ್ಟು ರಿಲೀಫ್ ಸರ್ವೀಸ್ ಗೌರವಾಧ್ಯಕ್ಷ ಇಕ್ಬಾಲ್ ಹಾಜಿ ಹೊಲಿಗೆ ಯಂತ್ರ ವಿತರಿಸಿದರು. ಉಳ್ಳಾಲ ಡಿವಿಜನ್ ಉಪಾಧ್ಯಕ್ಷ ಮುನೀರ್ ಸಖಾಫಿ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಸಂಚಾಲಕ ಉಮರ್ ಕೈರಂಗಳ, ಸದಸ್ಯ ಬಾತಿಷ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಎಸ್ಸೆಸ್ಸೆಫ್ ದ.ಕ ಕೋಶಾಧಿಕಾರಿ ಅಲ್ತಾಫ್ ಕುಂಪಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News