ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸರ್ಟಿಫಿಕೇಟ್ ಕೋರ್ಸ್

Update: 2016-08-27 18:52 GMT

ಮಣಿಪಾಲ, ಆ.27: ಮಣಿಪಾಲ ವಿವಿ ಆಶ್ರಯದಲ್ಲಿ ಮಣಿಪಾಲದ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದಲ್ಲಿ ಎರಡು ತಿಂಗಳ ಸಂಜೆ ವೇಳೆಯ ಸರ್ಟಿಫಿಕೇಟ್ ಕೋರ್ಸ್ ಸೆ.1ರಿಂದ ಪ್ರಾರಂಭಗೊಳ್ಳಲಿದೆ. ಈ ಕೋರ್ಸ್‌ನಲ್ಲಿ ಗಾಂಧೀಜಿಯವರ ಆಮೂಲಾಗ್ರ ಅಧ್ಯಯನ ಮತ್ತು ವರ್ತಮಾನದ ಸವಾಲುಗಳಿಗೆ ಮಹಾತ್ಮಾ ಗಾಂಧೀಜಿ ಅವರ ಪರ್ಯಾಯಗಳನ್ನು ಶೋಧಿಸುತ್ತದೆ. ಈ ಕೋರ್ಸ್ ಅ.30ರಂದು ಮುಕ್ತಾಯಗೊಳ್ಳುತ್ತದೆ.
ಎಂಟು ವಾರಗಳ ಈ ಕೋರ್ಸ್‌ನಲ್ಲಿ 1.ಗಾಂಧೀಜಿಯವರ ಜೀವನ, ತತ್ವಜ್ಞಾನ, ನೀತಿ ಮತ್ತು ರಾಜಕೀಯ, 2.ಶಾಂತಿ: ರಾಷ್ಟ್ರೀಯ ಮತ್ತು ಜಾಗತಿಕ, 3.ಆರ್ಥಿಕತೆ, ಪರಿಸರ, ವಿಜ್ಞಾನ, ತಂತ್ರಜ್ಞಾನ ಮತ್ತು ಆರೋಗ್ಯ, 4. ಪತ್ರಿಕೋದ್ಯೋಗ, ಸಾಹಿತ್ಯ, ಕಲೆ ಮತ್ತು ಸೌಂದರ್ಯಶಾಸ್ತ್ರ, 5.ಮಹಿಳೆ, ದಲಿತರು ಮತ್ತು ಸಿದ್ಧಾಂತಗಳು, 6.ಶಿಕ್ಷಣ ಮತ್ತು ಸಮಾಜಕಾರ್ಯ, 7. ನಾಯಕತ್ವ ಮತ್ತು ನಿರ್ವಹಣೆ, 8.ಜಾಗತೀಕರಣ ಮತ್ತು ಸಾಮಾಜಿಕ ಚಳವಳಿ -ಈ ವಿಷಯಗಳನ್ನು ಚರ್ಚಿಸಲಾಗುವುದು. ತರಗತಿಗಳು ವಾರದಲ್ಲಿ ಮೂರು ದಿನ ಬುಧವಾರದಿಂದ ಶುಕ್ರವಾರದವರೆಗೆ ಸಂಜೆ 5:30ರಿಂದ 7ರವರೆಗೆ ನಡೆಯಲಿವೆ. ವಿದ್ಯಾರ್ಹತೆ 10+2 ತೇರ್ಗಡೆ. ತರಗತಿಗಳು ಪೋಸ್ಟ್ ಆಫೀಸ್‌ನ ಹಿಂಭಾಗದ ಹಳೆಯ ಟ್ಯಾಪ್ಮಿ ಕಟ್ಟಡದಲ್ಲಿ ನಡೆಯಲಿವೆ. ವಿವರಗಳನ್ನು varadesh.gange@manipal.eduನಿಂದ ಅಥವಾ ದೂ.ಸಂ.: 0820-2922915ಕ್ಕೆ ಅಥವಾ www.manipal.edu (events) ಮೂಲಕ ಪಡೆಯಬಹುದು ಎಂದು ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News