ಯೆನೆಪೊಯ ತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Update: 2016-08-28 14:04 GMT

ಮೂಡುಬಿದಿರೆ, ಆ.28: ಯೆನೆಪೊಯ ತಾಂತ್ರಿಕ ವಿದ್ಯಾಲಯದಲ್ಲಿ ಯಾಂತ್ರಿಕ ವಿಭಾಗದ ವಿದ್ಯಾರ್ಥಿ ಸಂಘ ‘ಮೆಟಿಲಾನ್ಸ -16’ ಇದರ ಉದ್ಘಾಟನೆಯು ಬುಧವಾರ ಜರಗಿತು.

ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ, ಆರ್‌ಡಿ ಸೆಂಟರ್‌ನ ಪ್ರಾಧ್ಯಾಪಕ ಡಾ.ಸುದೇಶ ಬೇಕಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವ್ಯಾಸಂಗದ ಅಗತ್ಯತೆ, ಪ್ರಾಮುಖ್ಯತೆ, ಉದ್ಯೋಗ ಅವಕಾಶದ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ರಾಜೇಶ್ ಡಿಸೋಜ ಅಧ್ಯಕ್ಷತೆ ವಹಿಸಿ, ಶೈಕ್ಷಣೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ವಿಭಾಗ ಮುಖ್ಯಸ್ಥ ಡಾ.ಸತೀಶ್ ಎನ್. ವರದಿ ವಾಚಿಸಿದರು.

ಸಹಪ್ರಾಧ್ಯಾಪಕಿ ಸೌಜನ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಟೆಷಾನ್ ಟೆಲಸನ್ ಕಾರ್ಯಕ್ರಮ ನಿರೂಪಿಸಿ, ಪ್ರಿನ್ಸ್ಟನ್ ಪಿಂಟೊ ಸ್ವಾಗತಿಸಿದರು. ವರುಣ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News