ಸೆ.2ರಿಂದ ದಾರುಲ್ ಇಲ್ಮ್ ಮದ್ರಸದಲ್ಲಿ ವಯಸ್ಕರ ಇಸ್ಲಾಮಿಕ್ ಶಿಕ್ಷಣ ಆರಂಭ

Update: 2016-09-01 10:39 GMT

ಮಂಗಳೂರು, ಸೆ.1: ಪ್ರೌಢಾವಸ್ಥೆಗೆ ಬಂದು ಕುರ್‌ಆನ್ ಸರಿಯಾಗಿ ಓದಲು ತಿಳಿಯದ ಮತ್ತು ಓದಿದರೂ ವ್ಯಾಕರಣ ಸರಿ ಇಲ್ಲದ ವಯಸ್ಕರಿಗಾಗಿ ಫಳ್ನೀರ್‌ನ ದಾರುಲ್ ಇಲ್ಮ್ ಮದ್ರಸದಲ್ಲಿ ಇಸ್ಲಾಮೀ ಶಿಕ್ಷಣವನ್ನು ಆರಂಭಿಸಲಾಗಿದೆ.

ಅದರ ಉದ್ಘಾಟನಾ ಸಮಾರಂಭ ಸೆ.2ರಂದು ಶುಕ್ರವಾರ ರಾತ್ರಿ 8:30ಕ್ಕೆ ಮದ್ರಸದ ಸಭಾಂಗಣದಲ್ಲಿ ನಡೆಯಲಿದೆ. ಕುವೈಟ್‌ನ ಇಸ್ಲಾಮೀ ಪ್ರೆಸೆಂಟೇಶನ್ ಸೆಂಟರ್‌ನ ಸಂಶೋಧಕ ಇಜಾಝುದ್ದೀನ್ ಉಮರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕೋರ್ಸ್‌ನಲ್ಲಿ ಫಿಕ್‌ಹ್, ದೀನಿಯಾತ್, ಇಸ್ಲಾಮೀ ಇತಿಹಾಸ ಮತ್ತು ಕುರ್‌ಆನ್‌ನ ಅರ್ಥ ಕಲಿಸಲಾಗುವುದು. ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 98452 09449ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ರಫಿೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News