ಬಂಟ್ವಾಳ: ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಸೆರೆ

Update: 2016-09-01 11:25 GMT

ಬಂಟ್ವಾಳ, ಸೆ. 1: ಬಿ.ಸಿ.ರೋಡ್ ಸಮೀಪದ ಗೂಡಿನಬಳಿಯ ಪಂಪ್‌ಹೌಸ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗದೋಳಿ ಗ್ರಾಮದ ನಿವಾಸಿ ತವನಪ್ಪ(40), ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕೋಡಿಯಡ್ಕ ನಿವಾಸಿ ರಮೇಶ್ ಬೆಲ್ಚಡ(40) ಬಂಧಿತರು.

ಈ ಇಬ್ಬರು ಆರೋಪಿಗಳು ಗುರುವಾರ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಗೂಡಿನಬಳಿಯ ನೇತ್ರಾವತಿ ನದಿ ತೀರದ ಪಂಪ್‌ಹೌಸ್ ಬಳಿ ಅನುಮಾನಸದವಾಗಿ ತಿರುಗಾಡುತ್ತಿದ್ದರು. ಇವರನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ನಗರ ಠಾಣೆಯ ಎಎಸ್ಸೈ ಸಂಜೀವ ಮತ್ತು ಹೆಡ್ ಕಾನ್‌ಸ್ಟೇಬಲ್ ಸುರೇಶ್ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರ ಠಾಣೆ ಎಸ್ಸೈ ನಂದಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು ವಿಚಾರಣೆಯ ಬಳಿಕ ನ್ಯಾಯಾಲಕ್ಕೆ ಹಾಜರು ಪಡಿಸಲಾಗವುದು ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News