‘ಡೆಲ್ ಚಾಂಪ್ಸ್-2016’: ಮಂಗಳೂರಿನ ಸಹೋದರರು ಫೈನಲ್‌ಗೆ

Update: 2016-09-01 18:33 GMT

ಆಯ್ಕೆ ಮಂಗಳೂರು, ಸೆ.1: ಡೆಲ್‌ಇಂಡಿಯಾ ‘ಡೆಲ್ ಚಾಂಪ್ಸ್-2016’ ಕ್ವಿಝ್‌ನ ಮಂಗಳೂರು ನಗರಮಟ್ಟದ ಸ್ಪರ್ಧೆಯಲ್ಲಿ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಅಝಾಂ ಉಲ್ ರಹಮಾನ್ ಮತ್ತು ಅಬ್ದುಲ್ ಅಹದ್ ಶೇಖ್ ವಿಜೇತರಾಗಿದ್ದಾರೆ. ಅಕ್ಟೋಬರ್ 2016ರಲ್ಲಿ ನಡೆ ಯಲಿರುವ ರಾಷ್ಟ್ರೀಯ ಫೈನಲ್ಸ್ ನಲ್ಲಿ ಇವರು ಮಂಗಳೂರನ್ನು ಪ್ರತಿನಿಸಲಿದ್ದಾರೆ.


ಈ ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ‘ಶಾಲಾ ಹಂತ’ದಲ್ಲಿ ಸ್ಪರ್ಧಾ ತಂಡಗಳು ಪೂರ್ವಭಾವಿ ಸುತ್ತು ಬರೆದಿದ್ದು, 10 ತಂಡಗಳಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮ ಹಂತದ ಸುತ್ತಿನಲ್ಲಿ ಎರಡು ವಿಜೇತ ತಂಡಗಳು ಶಾಲೆಯನ್ನು ಪ್ರತಿನಿಸುತ್ತವೆ. ‘ನಗರ ಹಂತ’ದ ಸ್ಪರ್ಧೆಯಲ್ಲಿ 25 ಶಾಲೆಗಳಲ್ಲಿ 2 ವಿಜೇತ ತಂಡಗಳು ಆಯ್ಕೆಯಾಗುತ್ತವೆ. ನಗರ ಹಂತದ ಸುತ್ತಿನ ವಿಜೇತರು ರಾಷ್ಟ್ರೀಯ ೈನಲ್ಸ್‌ನಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರಮಟ್ಟದ ಡೆಲ್‌ಚಾಂಪ್ಸ್ 2016 ವಿಜೇತರಿಗೆ 1,00,000 ರೂ. ಶಿಷ್ಯವೇತನ ಮತ್ತು ಡೆಲ್ ಆಲ್-ಇನ್-ಒನ್ ಪಿಸಿ ಪಡೆಯುತ್ತಾರೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಿಗಳು ಕ್ರಮವಾಗಿ ಡೆಲ್‌ಡೆಸ್ಕ್‌ಟಾಪ್, 24 ಮತ್ತು 19 ಇಂಚುಗಳ ಡೆಲ್‌ಟಿಎ್ಟಿ ಮಾನಿಟರ್ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News