ಒಮಾನ್ ದೇಶದ 80ರ ವೃದ್ಧೆಗೆ ಮಂಗಳೂರಿನಲ್ಲಿ ಯಶಸ್ವಿ ಚಿಕಿತ್ಸೆ

Update: 2016-09-01 18:34 GMT

ಮಂಗಳೂರು, ಸೆ.1: ಮೂತೃಪಿಂಡ ಮತ್ತು ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಒಮಾನ್ ದೇಶದ 80ರ ವೃದ್ಧರೊಬ್ಬರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ಯಲ್ಲಿ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿ ಮಾಡಲಾಗಿದೆ. ಹಲವು ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ವೃದ್ಧೆಯು ಎದೆನೋವು (ಎಂಜೈನಾ) ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಸ್ಥಿತಿ ಯಲ್ಲಿದ್ದ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಕ್ರಿಯಾಟಿನಿನ್ ಮಟ್ಟ ಅಧಿಕ ಇದ್ದುದರಿಂದ ಅವರು ಈ ಶಸಕ್ರಿಯೆಗೆ ಒಳಗಾಗಲು ಶಕ್ತರಿರಲಿಲ್ಲ. ಸರಿಯಾಗಿ ತಪಾಸಣೆ ನಡೆಸಿದ ಶಸಕ್ರಿಯಾ ತಜ್ಞ ಡಾ.ರಾಜೇಶ್ ಭಟ್ ಯು. ವೃದ್ಧೆಯ ಹೃದಯದಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗಿದ್ದ ಅಡೆತಡೆಗಳನ್ನು ಪತ್ತೆಹಚ್ಚಿದ್ದರು.

ಆದರೆ ರೋಗಿಯ ವಯಸ್ಸು, ಉನ್ನತ ಸಕ್ಕರೆ ಮಟ್ಟ ಮತ್ತು ಮೂತ್ರಪಿಂಡದ ಸ್ಥಿತಿಯ ಕಾರಣದಿಂದ ತೀವ್ರ ಅಪಾಯವಿದ್ದ ಹಿನ್ನೆಲೆಯಲ್ಲಿ ಶಸಕ್ರಿಯೆ ನಡೆಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಡಯಾಲಿಸಿಸ್ ಕವರ್‌ನೊಂದಿಗೆ ಆ್ಯಂಜಿಯೋಪ್ಲಾಸ್ಟಿ ನಡೆಸುವುದು ಏಕೈಕ ಮಾರ್ಗವಾಗಿತ್ತು. ರಾಜೇಶ್ ಭಟ್ ಯು., ಮೂತ್ರಪಿಂಡ ರೋಗ ತಜ್ಞ ಡಾ.ಮಯೂರ್ ವಿ.ಪ್ರಭು, ಮಧುಮೇಹ ತಜ್ಞ ಡಾ.ಪವನ್ ಎಂ.ಆರ್. ನೇತೃತ್ವದ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಸುಪರಿಂಟೆಂಡೆಂಟ್ ಡಾ.ಆನಂದ ವೇಣುಗೋಪಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News