ವಿಟ್ಲ: ವ್ಯಕ್ತಿಯ ಅಪಹರಣ ಆರೋಪ: ಇಬ್ಬರು ವಶಕ್ಕೆ: ಚಿಟ್‌ಫಂಡ್ ವ್ಯವಹಾರ ಹಿನ್ನೆಲೆ

Update: 2016-09-02 18:32 GMT

ವಿಟ್ಲ, ಸೆ.2: ಇಲ್ಲಿನ ಕಸಬಾ ಗ್ರಾಮದ ಮಂಜಲಾಡಿ ನಿವಾಸಿ ಆನಂದ ಎಂಬ ವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಯಿಟ್ಟಿದ್ದಾರೆ ಎನ್ನಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀ ಸರು ಗಣೇಶ್ ಮತ್ತು ರಾಜೀವ ಎಂಬ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 ತನ್ನ ಪತಿಯನ್ನು ಗಣೇಶ್ ಮತ್ತು ರಾಜೀವ ಎಂಬವರು ಅಪಹರಿಸಿದ್ದಾರೆ ಎಂದು ಆನಂದರ ಪತ್ನಿ ಕಿಶೋರಿ ಆ.31ರಂದು ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು. ಎಸ್ಪಿ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ, ಗುರುವಾರ ರಾತ್ರಿ ಸುರತ್ಕಲ್‌ನ ಮನೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ.
ಒಕ್ಕೆತ್ತೂರು ಆನಂದ ಯಾನೆ ಮಂಜಲಾಡಿ ಆನಂದ ಗೌಡ ಬಡ್ಡಿಗೆ ಹಣ ನೀಡುವುದರ ಜತೆಗೆ ಚಿಟ್‌ಫಂಡ್‌ಗಳನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಮಧ್ಯೆ ಚಿಟ್‌ಫಂಡ್ ಮೂಲಕ ಸುಮಾರು 5 ಕೋಟಿ ರೂ.ವನ್ನು ಪಂಗ ನಾಮ ಹಾಕಿದ ಆನಂದನಿಂದ ತಮಗೆ ಬರ ಬೇಕಾಗಿದ್ದ 8 ಲಕ್ಷ ರೂ. ವಸೂಲಿಗಾಗಿ ಗಣೇಶ ಮತ್ತು ರಾಜೀವ ಕರೆದೊಯ್ದಿದ್ದರು ಎನ್ನಲಾಗಿದೆ.
ಸುಮಾರು 200ಕ್ಕೂ ಅಧಿಕ ಕುಟುಂ ಬಸ್ಥರು ಈತನ ಚಿಟ್‌ಫಂಡ್ ಹಣವನ್ನು ನಂಬಿದ್ದು, ಇದೀಗ ಬೀದಿ ಪಾಲಾಗಿದ್ದಾರೆ. ಈ ಮಧ್ಯೆ ಆನಂದ ಅನಾರೋಗ್ಯದ ಕಾರಣ ನೀಡಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎನ್ನಲಾಗಿದೆ.
ವಿಟ್ಲ ಪೊಲೀಸ್ ಠಾಣೆಯ ಬಳಿ ಶುಕ್ರವಾರ ಜಮಾಯಿಸಿದ ನೂರಾರು ಮಂದಿ ಆನಂದನನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಆನಂದ ಊರವರಿಗೆ ಪಂಗ ನಾಮ ಹಾಕಿದ್ದಾನೆ. ಆತನನ್ನು ಬಂಧಿ ಸಬೇಕು ಎಂದು ಶ್ರೀಧರ ಶೆಟ್ಟಿ ಗುಬ್ಯಮೇಗಿನಮನೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News