ಪೆಟ್ರೋಲ್ ಖಾಲಿಯಾಗಿ ಕಳ್ಳರಿಂದ ಬಚಾವಾದ ಬೈಕ್

Update: 2016-10-11 14:19 GMT

ಕೊಣಾಜೆ,ಅ.11: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕನ್ನು ಕಳ್ಳತನ ಮಾಡಿ ಬಳಿಕ ಅರ್ಧ ದಾರಿಯಲ್ಲಿ ಪೆಟ್ರೋಲ್ ಖಾಲಿಯಾದ ಪರಿಣಾಮ ಬೈಕ್ ಕಳ್ಳರು ಉಪಾಯವಿಲ್ಲದೆ ಪೊದೆಯ ನಡುವೆ ಬಿಟ್ಟು ಪರಾರಿಯಾದ ಘಟನೆ ಕೊಣಾಜೆ ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ.

ತಂಜರೆಯ ಜಿತೇಶ್  ಎಂಬವವರು ತನ್ನ ಎಫ್‌ಝಿ ಬೈಕ್‌ನಲ್ಲಿ ಪೆಟ್ರೋಲ್ ಕಡಿಮೆಯಿದ್ದ ಕಾರಣ ಬೈಕನ್ನು ಗ್ರಾಮಚಾವಡಿ ರಸ್ತೆ ಬದಿಯಲ್ಲಿ ಭಾನುವಾರ ಸಂಜೆ ನಿಲ್ಲಿಸಿ ತೆರಳಿದ್ದರು. ಬಳಿಕ ಮರುದಿನ ಬೆಳಗ್ಗೆ ಬೈಕ್ ಇಟ್ಟ ಸ್ಥಳದಿಂದ ನಾಪತ್ತೆಯಾಗಿತ್ತು. ಹುಡುಕಾಡುತ್ತಾ ಹೋದಾಗ ಹತ್ತಿರದ ಕೋಟಿಪದವು ಎಂಬಲ್ಲಿ ಪೊದೆಗಳ ಮಧ್ಯೆ ಪತ್ತೆಯಾಗಿದೆ. ಬೈಕ್‌ನಲ್ಲಿ ಪೆಟ್ರೋಲ್ ಮುಗಿದ ಕಾರಣ ಮುಂದಕ್ಕೆ ಹೋಗಲು ಉಪಾಯವಿಲ್ಲದೆ ಕಳ್ಳರು ಪೊದೆಗಳ ಮಧ್ಯೆ ಹಾಕಿ ಹೋಗಿದ್ದಾರೆ.

ಅದಕ್ಕೂ ಮೊದಲು ಗ್ರಾಮಚಾವಡಿಯ ಹನೀಫ್ ಎಂಬವರಿಗೆ ಸೇರಿದ ಬೈಕ್ ದೂಡಿಕೊಂಡು ಬಂದಿದ್ದ ಕಳ್ಳರು ಚಾಲನೆ ಮಾಡಲು ಆಗದ ಕಾರಣ ಗ್ರಾಮಚಾವಡಿಯಲ್ಲಿಟ್ಟು ಅಲ್ಲಿದ್ದ ಇನ್ನೊಂದು ಬೈಕ್ ಚಾಲನೆಗೆ ನೋಡಿ ಸೋತಿದ್ದಾರೆ. ಕೊನೆಗೆ ಎರಡೂ ಬೈಕ್‌ಳನ್ನು ಗ್ರಾಮಚಾವಡಿಯಲ್ಲಿ ಬಿಟ್ಟು ಎಫ್‌ಝಿ ಬೈಕ್ ಕೊಂಡೊಯ್ದು ಪೆಟ್ರೋಲ್ ಇಲ್ಲದ ಕಾರಣ ಪೊದೆಗೆ ಎಸೆದು ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News