ಅ.14ರಂದು ಉಡುಪಿಯಲ್ಲಿ ‘ಗೀತಾಂಜಲಿ ಸಿಲ್ಕ್ಸ್’ ಶುಭಾರಂಭ

Update: 2016-10-11 15:13 GMT

ಉಡುಪಿ, ಅ.11: ಉಡುಪಿಯ ಹಳೆಯ ಗೀತಾಂಜಲಿ ಟಾಕೀಸಿನ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಗೀತಾಂಜಲಿ ಶಾಪರ್ ಸಿಟಿ ಯಲ್ಲಿ ಆರ್.ಕೆ.’ಸ್ ಅವರ ‘ಗೀತಾಂಜಲಿ ಸಿಲ್ಕ್ಸ್’ ಅ.14ರಂದು ಸಂಜೆ ಐದು ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಉಡುಪಿಯ ಅತ್ಯಂತ ದೊಡ್ಡ ಬಟ್ಟೆ ಮಳಿಗೆಯಾಗಿರುವ ಗೀತಾಂಜಲಿ ಸಿಲ್ಕ್ಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ನಾಲ್ಕು ಅಂತಸ್ತುಗಳಲ್ಲಿ ವಿಶಾಲವಾದ ಸ್ಟೋರ್‌ಗಳಿವೆ. ಮಕ್ಕಳ, ಮಹಿಳೆಯರ, ಪುರುಷರ ಸೇರಿದಂತೆ ಎಲ್ಲ ವಯೋಮಾನದವರಿಗೂ ಬೇಕಾದ ಎಲ್ಲ ರೀತಿಯ ಬಟ್ಟೆಗಳು ವಿಶಾಲ ಶ್ರೇಣಿಯಲ್ಲಿ ಒಂದೇ ಸೂರಿನಡಿಯಲ್ಲಿ ಪ್ರತ್ಯೇಕವಾಗಿ ದೊರೆಯುತ್ತದೆ.

ತಳ ಅಂತಸ್ತಿನಲ್ಲಿರುವ ಚಿಣ್ಣರ ಉಡುಪಗಳ ವಿಭಾಗದಲ್ಲಿ ಎಳೆಯ ವಯಸ್ಸಿನ ಮಕ್ಕಳ ಬಟ್ಟೆಗಳು ಮತ್ತು ಪುರುಷರ ಫ್ಯಾಬ್ರಿಕ್ಸ್ ವಿಭಾಗದಲ್ಲಿ ಎಲ್ಲ ಬ್ರಾಂಡ್‌ಗಳ ರೆಡಿಮೆಡ್ ಬಟ್ಟೆಗಳು ದೊರೆಯುತ್ತವೆ. ಎರಡನೆ ಅಂತಸ್ತಿನಲ್ಲಿ ಮದುವೆ ಸೀರೆಗಳು, ಡಿಸೈನರ್ ಸೀರೆಗಳು, ಕಾಟನ್ ಸಿಲ್ಕ್, ಸೂರತ್ ಸೀರೆ ಗಳು, ಪ್ರಿಂಟೆಡ್, ಕಾಟನ್ ಕಾಶ್ಮೀರಿ ಬನಾರಸ್ ಡಿಸೈನರಿ, ಫ್ಯಾನ್ಸಿ ಸಾರಿ ಮತ್ತು ಅದಕ್ಕೆ ಬೇಕಾದ ಮ್ಯಾಚಿಂಗ್ ಬಟ್ಟೆಗಳು ದೊರೆಯುತ್ತವೆ. ಮೂರನೆ ಅಂತಸ್ತಿನಲ್ಲಿ ಮಹಿಳೆಯರಿಗೆ ಪಿಕ್ ಆ್ಯಂಡ್ ಚಾಯ್ಸಿ ಡ್ರೆಸ್ ಮೆಟೀರಿಯಲ್ಸ್ ವಿಭಾಗ, ವಿಶೇಷವಾಗಿ ಯುವತಿಯರ ಉಡುಗೆ ವಿಭಾಗ ಮತ್ತು ಮನೆಯ ಬಟ್ಟೆಯ ಸಾಮಾಗ್ರಿಗಳು, ಹೋಮ್ ಡೆಕೋರ್, ಕರ್ಟನ್ಸ್, ಬೆಡ್‌ಶೀಟ್ಸ್, ಬೆಡ್ ಸ್ಪ್ರೆಡ್ಸ್, ಬಾತ್ ಟವೆಲ್ಸ್ ಮುಂತಾದವುಗಳ ವಿಶಾಲವಾದ ವಿಭಾಗವೂ ಇದೆ. 60ಸಾವಿರ ಚದರ ಅಡಿ ವಿಸ್ತ್ರೀರ್ಣದ ಈ ವಿಶಾಲ ಮಳಿಗೆ ಯಲ್ಲಿ ಪಾರ್ಕಿಂಗ್‌ಗೆ ವಿಶಾಲ ಸ್ಥಳಾವಕಾಶ ಒದಗಿಸಲಾಗಿದೆ. ಇಲ್ಲಿ 125 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಪ್ರಮೋದ್ ಮಧ್ವ ರಾಜ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರಾದ ಆಸ್ಕರ್ ಫೆರ್ನಾಂಡಿಸ್, ಶೋಭಾ ಕರಂದ್ಲಾಜೆ, ಸಚಿವ ಯು.ಟಿ.ಖಾದರ್, ಶಾಸಕ ರಾದ ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿನಯ ಕುಮಾರ್ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿ ರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News