ವಿಶ್ವದ ಪ್ರಪ್ರಥಮ ಹಸಿರು ಮಸೀದಿಗೆ 'ಐಜಿಬಿಸಿ ಪ್ಲಾಟಿನಮ್ ಅವಾರ್ಡ್'

Update: 2016-10-12 12:00 GMT

ಮಂಗಳೂರು, ಅ.12: ಕರ್ನಾಟಕದ ಪಶ್ಚಿಮ ಕರಾವಳಿಯ ಕುಂದಾಪುರದ ಕೋಡಿ ಬೀಚ್‌ಗೆ ಅಭಿಮುಖವಾಗಿ ನಿಂತಿರುವ ಬದ್ರಿಯಾ ಜುಮಾ ಮಸ್ಜಿದ್ ವಿಶ್ವದ ಪ್ರಪ್ರಥಮ ಹಸಿರು ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್ ಪರಂಪರೆ ಹಾಗು ಅತ್ಯಾಧುನಿಕ ಪರಿಸರಸ್ನೇಹಿ ತಂತ್ರಜ್ಞಾನದ ಅತ್ಯುತ್ತಮ ಅಂಶಗಳನ್ನು ಅಳವಡಿಸಿಕೊಂಡು ಈ ವಿಶಿಷ್ಟ ಮಸೀದಿಯನ್ನು ನಿರ್ಮಿಸಿದೆ. 

ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಿತ ಹಾಗೂ ಹಸಿರು ನಿರ್ಮಾಣದ ಕ್ಷೇತ್ರದಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರುವ ಬದ್ರಿಯಾ ಜುಮಾ ಮಸೀದಿಗೆ ಈಗ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಎಆಇ) ಇದೇ ಮೊದಲ ಬಾರಿಗೆ ಪ್ರಾರಂಭಿಸಲಾದ 'ಐಜಿಬಿಸಿ' ಗ್ರೀನ್ ಪ್ಲೇಸ್ ಆಫ್ ವರ್ಶಿಪ್ (ಐಜಿಬಿಸಿ ಹಸಿರು ಆರಾಧನಾ ಸ್ಥಳ ) ವಿಭಾಗದಲ್ಲಿ ಪ್ರತಿಷ್ಠಿತ ಪ್ಲಾಟಿನಮ್ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ವಿಭಾಗದಲ್ಲಿ ಕ್ರಾಂತಿಕಾರಿ ಮಾದರಿಯಾಗಿರುವ ಬದ್ರಿಯಾ ಜುಮಾ ಮಸೀದಿ ಎಲ್ಲ ಧರ್ಮಗಳ ನಡುವೆ ಸೌಹಾರ್ದದ ಕೊಂಡಿ ಬೆಸೆಯಲು ಹಾಗೂ ಇಲ್ಲಿಗೆ ಭೇಟಿ ನೀಡುವ ವಿಶ್ವದ ಎಲ್ಲ ಜನರಿಗ ಮನಶಾಂತಿ ಪಡೆಯುವ ಆಲಯವಾಗುವ ಮೂಲಕ ಆಧುನಿಕ ಇಸ್ಲಾಮಿನ ಅತ್ಯುತ್ತಮ ಸಂಕೇತವಾಗಿ ಮೂಡಿಬಂದಿದೆ. ಹೆಚ್ಚಿನ ವಿವರಗಳಿಗೆ ರಮೇಶ್ ಸುತರ್ (ಮೊ.ಸಂ.: 9845051862)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News