ಎಲ್ಲೂರು: ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2016-10-12 15:25 GMT

ಪಡುಬಿದ್ರೆ, ಅ.12: ಎಲ್ಲೂರು ಗ್ರಾಮದಲ್ಲಿ ಅದಾನಿ ಯಪಿಸಿಎಲ್ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಕಾಂಕ್ರೀಟೀಕರಣಗೊಂಡ ಕುಂಜೂರು ಮತ್ತು ದುರ್ಗಾ ನಗರ ಸಂಪರ್ಕ ರಸ್ತೆಯನ್ನು ಸೋಮವಾರ ಉದ್ಘಾಟಿಸಲಾಯಿತು.

21.50 ಲಕ್ಷ ರೂ. ವೆಚ್ಚದ ಈ 230 ಅಡಿ ಉದ್ದದ ರಸ್ತೆ ಕಾಮಗಾರಿಯನ್ನು ಅದಾನಿ ಯುಪಿಸಿಎಲ್ ಪೂರ್ಣಗೊಳಿಸಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತಿ ಮಧ್ವರಾಜ್ ಹಾಗೂ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ರಸ್ತೆಗೆ ಚಾಲನೆ ನೀಡಿದರು.

ಕಿಶೋರ್ ಆಳ್ವ ಮಾತನಾಡಿ, ಎಲ್ಲೂರು ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅದಾನಿ ಯಪಿಸಿಎಲ್ ವತಿಯಿಂದ ರೂ. 3.75 ಕೋಟಿ ರೂ. ಅನುದಾನವನ್ನು ಸಿಎಸ್‌ಆರ್ ಯೋಜನೆಯಡಿ ನೀಡಲಾಗಿದ್ದು, ಗ್ರಾಮ ಪಂಚಾಯತ್ ನೀಡಿರುವ ಕ್ರಿಯಾಯೋಜನೆ ಮೇರೆಗೆ ಈ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ 40 ಲಕ್ಷ ರೂ. ವೆಚ್ಚದ ಎಲ್ಲೂರು ದೇವಸ್ಥಾನದಿಂದ ಕೆಮ್ಮೆಂಡಲು ಕೂಡು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಸಹ ಅದಾನಿ ಯುಪಿಸಿಎಲ್ ಕೈಗೆತ್ತಿಕೊಂಡು ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಆಳ್ವ ತಿಳಿಸಿದರು.

ಗ್ರಾಮಸ್ಥರ ಅನುಕೂಲಕ್ಕಾಗಿ ಅದಾನಿ ಯಪಿಸಿಎಲ್ ಅಭಿವೃದ್ಧಿ ಪರ ಕೆಲಸಗಳನ್ನು ನಿರ್ವಹಿಸಲು ಬದ್ಧವಾಗಿದೆ. ಯಪಿಸಿಎಲ್ 2ನೆ ಹಂತದ ವಿಸ್ತರಣೆ ಆಗುವ ಮೊದಲು ಸಾರ್ವಜನಿಕ ಸಭೆಯನ್ನು ನಡೆಸಲಾಗುವುದು ಎಂದು ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕು ಪಂಚಾಯತ್ ಸದಸ್ಯರಾದ ಕೇಶವ ಮೊಯ್ಲಿ, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಶ್ರೀವತ್ಸ ರಾವ್, ದಿನೇಶ್ ಶೆಟ್ಟಿ, ಎಲ್ಲೂರು ಪಂಚಾಯತ್ ಸದಸ್ಯರಾದ ಸತೀಶ್ ಶೆಟ್ಟಿಗುಡ್ದೆಚ್ಚಿ, ಪೂರ್ಣಿಮಾ ಪ್ರಸಾದ್, ರಾಜೇಂದ್ರ, ಪುಷ್ಪಾ ಶೆಟ್ಟಿ, ಲೀಲಾ ದೇವಾಡಿಗ, ಮೋಹನ್ ಆಚಾರ್ಯ, ರಹೀಂ, ಅದಾನಿ ಯಪಿಸಿಎಲ್‌ನ ಎಜಿಎಂ ಗೀರಿಶ್ ನಾವಡ, ಪ್ರಬಂಧಕ ರವಿ ಜೇರೆ, ವಸಂತಕುಮಾರ್, ಅದಾನಿ ಫೌಂಡೇಶನ್‌ನ ವೀನಿತ್ ಅಂಚನ್, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News