ಆಳ್ವಾಸ್: ‘ನಿಂಗೊಲ್ ಚಕೋಬಾ’ ಮಣಿಪುರಿ ಹಬ್ಬ

Update: 2016-10-14 18:34 GMT

ಮೂಡುಬಿದಿರೆ, ಅ.14: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಣಿಪುರಿ ವಿದ್ಯಾರ್ಥಿಗಳಿಗೋಸ್ಕರ ‘ನಿಂಗೊಲ್ ಚಕೋಬಾ’ ಎಂಬ ಮಣಿಪುರಿ ಹಬ್ಬದ ಆಚರಣೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.

ಮಣಿಪುರದ ಮಾಜಿ ಸಚಿವ ಡಾ.ನರಾಸಿಂಗ್ ಮತಾನಾಡಿ, ರಾಜಕೀಯ ನಮ್ಮನ್ನು ವಿಭಜಿಸಿದರೂ, ಸಂಸ್ಕೃತಿ ಒಗ್ಗೂಡಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಾಂಸ್ಕೃತಿಕ ವೌಲ್ಯವನ್ನು ಹೆಚ್ಚಿಸುವ ಶಿಕ್ಷಣವನ್ನು ಪಡೆಯಬೇಕು ಎಂದರು. ಪ್ರತಿಯೊಬ್ಬ ನಾಗರಿಕ ತನ್ನ ಸಂಸ್ಕೃತಿಯನ್ನು ಕಾಪಾಡುವ ಸೈನಿಕನಂತೆ ಕಾರ್ಯನಿರ್ವಹಿಸಬೇಕು. ಶಾಂತಿಯನ್ನು ಸಾರುವ ಸಂಸ್ಕೃತಿ ಪ್ರತಿಯೊಬ್ಬರ ಧರ್ಮವಾಗಬೇಕು. ದೇಶದ ಸಾಂಸ್ಕೃತಿಕ ಸಾಮರಸ್ಯ ಪ್ರತಿಯೊಬ್ಬ ಪ್ರಜೆಯನ್ನು ಸರ್ವತೋಮುಖ ಬೆಳವಣಿಗೆಯೆಡೆಗೆ ಕೊಂಡೊಯ್ದು, ಸತ್ಪ್ರಜೆಯನ್ನಾಗಿ ರೂಪಿಸುತ್ತದೆ ಎಂದು ಹೇಳಿದರು. ಈಗಾಗಲೇ ಮೂಡುಬಿದಿರೆಯಲ್ಲಿ ಮಣಿಪುರಿ ಕಾಲನಿಯನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಜಾಗವನ್ನು ಕಾಯ್ದಿರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಣಿಪುರಿ ಗಳು ಈ ಪ್ರದೇಶದಲ್ಲಿ ನೆಲೆಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯುವಜನತೆ ಈ ದೇಶದ ಸಂಪತ್ತು. ಅವರನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಲೆಸಿ, ದೇಶದ ಪ್ರಗತಿಗೆ ಶ್ರಮಿಸುವಂತೆ ಮಾಡಬೇಕು ಎಂದರು.

ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಣಿಪುರಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮ ದಲ್ಲಿ ಗೌರವಿಸಲಾಯಿತು. ಮಣಿಪುರಿ ನೃತ್ಯ ಪ್ರಕಾರ ಗಳಾದ ಮೈಬೀ ಡ್ಯಾನ್ಸ್, ದೋಲ್ ಚಲೋನ್, ದಶಾವತರ, ಸ್ಟಿಕ್ ಡ್ಯಾನ್ಸ್ ಹಾಗೂ ಕಬುಯಿ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ನಂತರ ಮಣಿಪುರಿ ವಿದ್ಯಾರ್ಥಿಗಳು ತಯಾರಿಸಿದ ಖಾದ್ಯಗಳಾದ ಇರೊಂಬಾ, ಚಂಪೂಟ್ ಹಾಗೂ ಕಂಗೌಗಳನ್ನು ಉಣಬಡಿಸಲಾಯಿತು. ಕಾರ್ಯಕ್ರಮದಲ್ಲಿ ಪೂರ್ವಾಂಚಲ್ ವಿಕಾಸ್ ಪರಿಷತ್‌ನ ಸಂಚಾಲಕ ಪುಷ್ಪರಾಜ್, ಆಳ್ವಾಸ್ ನ್ಯಾಚು ರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಉಪನ್ಯಾಸಕ ನಂದೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News