ಇಂದಿನ ಕಾರ್ಯಕ್ರಮಗಳು

Update: 2016-10-15 18:17 GMT

ಉಡುಪಿ ಜಿಲ್ಲೆ
ವಿಶೇಷ ಉಪನ್ಯಾಸ: ಸುಹಾಸಂ ವತಿಯಿಂದ ‘ಜಗದಗಲ’ ಖ್ಯಾತಿಯ ಸಾಹಿತಿ ಪ್ರೇಮಶೇಖರ ಇವರಿಂದ ‘ಕಾಶ್ಮೀರ-ಭೂಲೋಕದ ಸ್ವರ್ಗ ನರಕವಾಯಿತೇ?’ ವಿಷಯದ ಕುರಿತು ವಿಶೇಷ ಉಪನ್ಯಾಸ. ಸಮಯ: ಸಂಜೆ 4ಕ್ಕೆ. ಸ್ಥಳ: ಹೊಟೇಲ್ ಕಿದಿಯೂರಿನ ಮಹಾಜನ ಸಭಾಂಗಣ, ಉಡುಪಿ.
*ಅಪ್ಟಿಕಾನ್-2016:  
ಮಣಿಪಾಲ ವಿವಿಯ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಯನ್ಸ್‌ನ ವತಿಯಿಂದ ನಡೆದಿರುವ ಅಸೋಸಿಯೇಶನ್ ಆಫ್ ಫಾರ್ಮಸಿ ಟೀಚರ್ಸ್‌ ಆಫ್ ಇಂಡಿಯಾದ ಸ್ವರ್ಣಮಹೋತ್ಸವದ ಆಚರಣೆ ಹಾಗೂ 21ನೆ ಅಪ್ಟಿ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ. ಸಮಯ: ಅಪರಾಹ್ನ 12:30ಕ್ಕೆ. ಸ್ಥಳ: ಡಾ.ಟಿಎಂಎ ಪೈ ಸಭಾಂಗಣ, ಕೆಎಂಸಿ ಮಣಿಪಾಲ. *ದಕ್ಷಿಣ ಭಾರತ ಯೋಗಾ ಕ್ರೀಡಾ ಸ್ಪರ್ಧೆ: ಯೋಗಾ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ನಡೆದಿರುವ ದಕ್ಷಿಣ ಭಾರತ ಯೋಗ ಸ್ಪೋರ್ಟ್ಸ್‌ಚಾಂಪಿಯನ್‌ಶಿಪ್‌ನ ಸಮಾರೋಪ ಹಾಗೂ ಬಹುಮಾನ ವಿತರಣೆ. ಸಮಯ: ಪೂರ್ವಾಹ್ನ 11ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ. *ನೃತ್ಯ ರೂಪಕೋತ್ಸವ: ಪರ್ಯಾಯ ಪೇಜಾವರ ಮಠದ ವತಿಯಿಂದ ನೃತ್ಯನಿಕೇತನ ಕೊಡವೂರು ರಜತಪಥ-ರಜತ ಮಹೋತ್ಸವ ಸಮಿತಿ ವತಿಯಿಂದ ನಡೆದಿರುವ ನೃತ್ಯ ರೂಪಕೋತ್ಸವದಲ್ಲಿ ನೃತ್ಯನಿಕೇತನ ಕೊಡವೂರು ಇದರ ಕಲಾವಿದರಿಂದ ಸು.ರಂ.ಎಕ್ಕುಂಡಿ ರಚಿತ ‘ಶಬರಿ’ ನಾಟಕದ ಹಾಗೂ ಅಭಿಲಾಷ ಸೋಮಯಾಜಿ ರಚಿತ ‘ಮಳೆ ಬಂತು ಮಳೆ’. ಸಮಯ: ಸಂಜೆ 7ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ.
*ಪೇಜಾವರ ಶ್ರೀಗಳ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 9ರಿಂದ 11ರವರೆಗೆ ರಾಜಾಂಗಣದಲ್ಲಿ ಪ್ರಥಮ ದಕ್ಷಿಣ ಭಾರತ ಯೋಗ ಸ್ಪರ್ಧೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7ರಿಂದ ರಾಜಾಂಗಣದಲ್ಲಿ ನೃತ್ಯ ರೂಪಕೋತ್ಸವ.
*ಕೃಷಿ ಮೇಳ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕೃಷಿ ಮೇಳದಲ್ಲಿ ಸರಣಿ ವಿಚಾರಗೋಷ್ಠಿ ಹಾಗೂ ಸಂಜೆ ರೈತ- ವಿಜ್ಞಾನಿಗಳ ನಡುವೆ ಮುಕ್ತ ಚರ್ಚೆ. ಸಮಯ: ಬೆಳಗ್ಗೆ 10:30ರಿಂದ. ಸ್ಥಳ: ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News