ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಭೆ

Update: 2016-10-16 14:01 GMT

ಮಂಗಳೂರು, ಅ. 16: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಇತ್ತೀಚೆಗೆ ದ.ಕ.ಜಿಲಾ ಮಹಿಳಾ ಕಾಂಗ್ರೆಸ್ ನೂತನಅಧ್ಯಕ್ಷೆಯಾಗಿ ನೇಮಕ ಗೊಂಡ ಶಾಲೆಟ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ 2018ಕ್ಕೆ ವಿಧಾನಸಭೆ ಚುನಾವಣೆ ಬರಲಿದೆ. ಮಹಿಳೆಯರನ್ನು ಒಗ್ಗೂಡಿಸುವಂತಹ ಕಾರ್ಯ ಈಗಿಂದಿಗಲೇ ಆರಂಭವಾಗಬೇಕು. ಅವರಿಂದ ಪಕ್ಷದ ಕಾರ್ಯಕರ್ತೆಯರ ನೊಂದಾವಣೆ ಕೆಲಸ ಆಗಬೇಕು ಎಂದರು.

ಮುಖ್ಯಅತಿಥಿಯಾಗಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಪಕ್ಷದಲ್ಲಿ ಮಹಿಳೆಯರನ್ನು ಬಲಪಡಿಸುವಂತಹ ಕಾರ್ಯ ಅಗತ್ಯವಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಜನ ಮಹಿಳೆಯರನ್ನು ಸೇರಿಸಿದರೆ ಪಕ್ಷ ಬಲವರ್ಧನೆ ಸಾಧ್ಯಎಂದರು.

 ಬ್ಲಾಕ್‌ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯ,ಕ್ಷತೆ ವಹಿಸಿದ್ದರು. ಪರಿಶಿಷ್ಠ ಜಾತಿ / ಪಂಗಡಗಳ ಘಟಕದ ಮಂಗಳೂರು ದಕ್ಷಿಣ ಬ್ಲಾಕ್ ಸಮಿತಿಗೆ ಮಾಜಿ ಕಾರ್ಪೊರೇಟರ್ ಜಯಲಕ್ಷ್ಮೀ ಅವರನ್ನು ಅಧ್ಯಕ್ಷೆಯಾಗಿ ನೇಮಿಸಲಾಯಿತು.

 ಬೆಂಗರೆ ವಾರ್ಡ್ ಕಾಂಗ್ರೆಸ್ ಸಮಿತಿಗೆ ಆಸಿಫ್ ಅಹ್ಮದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಸಭೆಯಲ್ಲಿಪಕ್ಷದ ಮುಖಂಡರಾದ ಪ್ರಭಾಕರ್ ಶ್ರೀಯಾನ್, ಟಿ.ಕೆ.ಸುಧೀರ್, ಸುರೇಶ್ ಶೆಟ್ಟಿ, ಸದಾಶೀವ ಅಮೀನ್, ದುರ್ಗಾಪ್ರಸಾದ್, ಅಬ್ದುಲ್ ಸಲೀಮ್, ನಮಿತಾರಾವ್, ಜಸಿಂತಾ ಆಲ್ಫ್ರೆಡ್, ರತಿಕಲಾ, ಅಪ್ಪಿ, ಶೈಲಜಾ, ಕವಿತಾ, ಪ್ರಕಾಶ ಅಳಪೆ, ಅಬ್ದುಲ್ ರವೂಫ್, ಶೇಖರ ಬೆಂಗರೆ, ಅಬೂಬಕರ್, ಭರತೇಶ್‌ಅಮೀನ್, ರಮಾನಂದ ಪೂಜಾರಿ, ಹುಸೇನ್ ಬೋಳಾರ್, ಉಮೇಶ್ ದೇವಾಡಿಗ, ಚೇತನ ಬೆಂಗರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News