ಮುಅಲ್ಲಿಮರು ಸಮುದಾಯದ ಅಭಿಮಾನ: ಝೈನುಲ್ ಆಬಿದೀನ್ ತಂಙಳ್

Update: 2016-10-17 15:02 GMT

ಮಂಗಳೂರು, ಅ.17: ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಹಾಗೂ ಜಂಇಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ಮುಅಲ್ಲಿಮ್ ಅಧ್ಯಯನ ಶಿಬಿರವನ್ನು ಕೇರಳದ ಕುನ್ನುಂಗೈ ಸೈಯದ್ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗತಕಾಲದ ಪೂರ್ವಕಾಲದ ತ್ಯಾಗದ ಫಲವನ್ನು ಅನುಭವಿಸುವಂತಹ ಭಾಗ್ಯವಂತರು ನಾವಾಗಿದ್ದು, ದೀನಿ ಪ್ರಚಾರಕ್ಕಾಗಿ ಆಹೋರಾತ್ರಿಯ ಪರಿಶ್ರಮದ ಫಲವಾಗಿ ಇಂದು ಮೊಹಲ್ಲಾಗಳಲ್ಲಿ ದೀನಿ ಚೈತನ್ಯ ತುಂಬಿ ತುಳುಕುತ್ತಿದೆ ಎಂದರು.

ಸಮಸ್ತ ಉಲಮಾ ಉಮರ ನೇತಾರರ ಜೀವನವನ್ನು ಸ್ಮರಿಸಿದ ತಂಙಳ್, ಮುಅಲ್ಲಿಮರು ನಮ್ಮ ಮಕ್ಕಳ ಪ್ರಾಥಮಿಕ ಬಾಲಪಾಠವನ್ನು ಬೋಧಿಸುವ ಈ ಮಹನೀಯ ಸೇವೆಯನ್ನು ಮೆಚ್ಚಬೇಕು. ಮುಅಲ್ಲಿಮರು ಸಮುದಾಯದ ಅಭಿಮಾನವಾಗಿದ್ದು, ಅವರ ಎಲ್ಲಾ ವಿಧದ ಸಮಸ್ಯೆಗೆ ಸ್ಪಂದಿಸಿ ಅವರನ್ನು ಮುಖ್ಯಧಾರೆಗೆ ತರುವಲ್ಲಿ ಸಮುದಾಯ ಮುಂದಾಗಬೇಕೆಂದು ಕರೆ ನೀಡಿದರು. ಅಲ್ಲದೆ ಮುಅಲ್ಲಿಮರು ತನ್ನ ಜವಾಬ್ದಾರಿಯುತ ಸೇವೆಯನ್ನು ನಿಷ್ಕಳಂಕ ಮನೋಭಾವದಿಂದ ನಿರ್ವಹಿಸಲು ಬದ್ಧರಾಗಬೇಕೆಂದು ಹೇಳಿದರು.

ಬಂದರ್ ದರ್ಗಾ ಝಿಯಾರತ್‌ಗೆ ಕೆ. ಎಲ್. ಉಮರ್ ದಾರಿಮಿ ನೇತೃತ್ವ ವಹಿಸಿದರು. ಧ್ವಜಾರೋಹಣವನ್ನು ದ.ಕ. ಜಿಲ್ಲೆ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮೊಯ್ದಿನಬ್ಬ ಹಾಜಿ ನೆರವೇರಿಸಿದರು.

ದ.ಕ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತ ಭಾಷಣ ಮಾಡಿದರು. ಸಮಸ್ತ ಮುಶಾವರ ದಕ್ಷಿಣ ಕರ್ನಾಟಕ ಅಧ್ಯಕ್ಷ ದ.ಕ. ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಮುಶಾವರ ದಕ್ಷಿಣ ಕರ್ನಾಟಕ ಕೋಶಾಧಿಕಾರಿ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುಆ ನೆರೆವೇರಿಸಿದರು.

ಮದ್ರಸ ಮ್ಯಾನೇಜ್‌ಮೆಂಟ್‌ನ ದ.ಕ. ಜಿಲ್ಲಾ ಉಪಾಧ್ಯಕ್ಷ ಹಾಜಿ ಎಸ್. ಅಬ್ದುಲ್ ಖಾದರ್ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಕೆಐಎಂವಿ ಬೋರ್ಡ್‌ನ ನಿವೃತ್ತ ಮ್ಯಾನೇಜರ್ ಹಾಜಿ ಪಿಣಂಗೋಡ್ ಅಬೂಬಕರ್ ವಿಷಯ ಮಂಡನೆ ಮಾಡಿದರು. ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಸಮಸ್ತದ ಉದ್ದೇಶಿತ ಕಟ್ಟಡ ನಕಾಶೆಯನ್ನು ದ.ಕ.ಮದ್ರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಶಾಹುಲ್ ಹಮೀದ್ ಹಾಜಿಯವರಿಗೆ ಹಸ್ತಾಂತರಿಸಿದರು.

ಅತ್ರಾಡಿ ಖಾಝಿ ಶೈಖುನಾ ಕೆ.ಅಬೂಬಕರ್ ಹಾಜಿ, ಮೂಡಿಗೆರೆ ಖಾಝಿ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್, ಸಮಸ್ತ ಮುಶಾವರ ದಕ್ಷಿಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಶರೀಫ್ ಫೈಝಿ ಕಡಬ, ಮದ್ರಸ ಮ್ಯಾನೇಜ್‌ಮೆಂಟ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಕೊಡಾಜೆ, ಲತೀಫ್ ಹಾಜಿ ಮದರ್‌ಇಂಡಿಯಾ, ಹನೀಫ್ ಹಾಜಿ ಮಂಗಳೂರು, ಬಾಷಾ ತಂಙಳ್, ಸಿತಾರ್ ಮಜೀದ್ ಹಾಜಿ, ಎಂ.ಜಿ. ಸಾಹುಲ್ ಹಮೀದ್ ಗುರುಪುರ, ಹಕೀಂ ಪರ್ತಿಪಾಡಿ ವಿಟ್ಲ, ಇಕ್ಬಾಲ್ ಮುಲ್ಕಿ, ಶಬೀರ್ ಮೂಡುಬಿದಿರೆ, ನೌಷಾದ್ ಹಾಜಿ ಸೂರಲ್ಪಾಡಿ, ಅಮ್ಮಿ ಹಮೀದ್ ಹಾಜಿ ಬೆಂಗ್ರೆ, ಬೊಳ್ಳೂರು ಅಸ್ಗರ್ ಫೈಝಿ, ಕೆಂಪಿ ಮುಸ್ತಫಾ ಹಾಜಿ ಉಪ್ಪಿನಂಗಡಿ, ಮುಸ್ತಫಾ ಫೈಝಿ, ಹಾಜಿ ಮುಹಮ್ಮದ್ ಸುಳ್ಯ, ಸುಲೈಮಾನ್ ಹಾಜಿ ಕಲ್ಲಡ್ಕ, ರಿಯಾಝ್ ಹಾಜಿ ಬಂದರ್, ಶೇಕಬ್ಬ ಹಾಜಿ ಕಿನ್ಯ, ಮೊಯ್ದೀನ್ ಕುಂಞಿ ಹಾಜಿ ಮರಾಠಿಮೂಲೆ, ಆದಂ ದಾರಿಮಿ, ಲತೀಫ್ ದಾರಿಮಿ, ಸಿದ್ದಿಕ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು.

ಉಮರ್ ದಾರಿಮಿ ಸ್ವಾಗತಿಸಿದರು. ರಫೀಕ್ ಹಾಜಿ ವಂದಿಸಿದರು. ಕೆ.ಎಂ. ಕೊಡುಂಗಾಯಿ ಹಾಗೂ ಅಶ್ರಫ್ ಮೌಲವಿ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News