ಸ್ವಾತಂತ್ರ ಹೋರಾಟಗಾರರ ಮೇಲೆ ಅಪವಾದ ಹೊರಿಸುವುದು ದೇಶದ್ರೋಹ: ಸಚಿವ ರೈ

Update: 2016-10-18 18:40 GMT

ಬೆಳ್ತಂಗಡಿ, ಅ.18: ದೇಶದ ಸ್ವಾತಂತ್ರ ಕ್ಕಾಗಿ ಜೈಲುವಾಸ ಅನುಭವಿಸಿದ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಇದು ನಿಜವಾದ ದೇಶದ್ರೋಹದ ಚಟುವಟಿಕೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬೆಳ್ತಂಗಡಿಯ ಸಿವಿಸಿ ಸಭಾಂಗಣ ದಲ್ಲಿ ಮಂಗಳವಾರ ಆಯೋಜಿಸಲಾ ಗಿದ್ದ ‘ಕಾಂಗ್ರೆಸ್ ನಡಿಗೆ ಗ್ರಾಮ ಸ್ವರಾಜ್ ಕಡೆಗೆ’ ವಿಚಾರದಲ್ಲಿ ಗಾಮಮಟ್ಟದ ಕಾಂಗ್ರೆಸ್ ಮುಖಂಡರಿಗಾಗಿ ಆಯೋ ಜಿಸಲಾಗಿದ್ದ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾಂಗ್ರೆಸ್ ಪಕ್ಷ ನಡೆಸಿದ ಹೋರಾಟವೇ ಕಾರಣ. ಸ್ವಾತಂತ್ರ ಬಂದ ದಿನಗಳಲ್ಲಿ ಬ್ರಿಟಿಷರು ಲೂಟಿ ಹೊಡೆದು ಬಿಟ್ಟು ಹೋಗಿದ್ದ ಭಾರತದಲ್ಲಿ ಗುಂಡು ಸೂಜಿಗೂ ಪರದಾಡುವಂತಹ ಸ್ಥಿತಿ ಇತ್ತು. ಅಂತಹ ಸ್ಥಿತಿಯಿಂದ ದೇಶವನ್ನು ವಿಶ್ವದ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಶಾಸಕ ಕೆ.ವಸಂತ ಬಂಗೇರ, ರಾಜ್ಯ ಕಾಂಗ್ರೆಸ್ ಸರಕಾರವು ಹಲವು ಜನಪ್ರಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಬೆಳ್ತಂಗಡಿ ತಾಲೂಕಿ ನಲ್ಲೂ ಈ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದನ್ನು ಸಹಿಸಲು ಸಾಧ್ಯವಾಗದ ಕೆಲವರು ವಸಂತ ಬಂಗೇರ ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಇದೇ ವೇಳೆ ಪಕ್ಷದ ಹಿರಿಯರಾದ ಮಂಜುನಾಥ ಕಾಮತ್‌ರನ್ನು ಶಾಸಕ ಕೆ. ವಸಂತ ಬಂಗೇರ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಮಿತಾ, ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ, ಪಕ್ಷದ ಮುಖಂ ಡರಾದ ಇಬ್ರಾಹೀಂ ಕೋಡಿಜಾಲ್, ಶ್ರೀನಿವಾಸ ಕಿಣಿ, ಸರ್ವೋತ್ತಮ ನೆಲ್ಯಾಡಿ, ನೇಮಿರಾಜ ಶೆಟ್ಟಿ, ಪದ್ಮನಾಭ ನರಿಂಗಾಣ, ಉಪಸ್ಥಿತರಿದ್ದರು. ಕೇಶವ ಗೌಡ ಬೆಳಾಲು ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News