ಆಟೊರಿಕ್ಷಾಗಳಲ್ಲಿ ಎಲ್‌ಇಡಿ ಜಾಹೀರಾತು: ಆರ್‌ಟಿಒ ಎಚ್ಚರಿಕೆ

Update: 2016-10-18 18:42 GMT

ಮಂಗಳೂರು, ಅ.18: ಆಟೊ ರಿಕ್ಷಾಗಳ ಹಿಂಬದಿಯಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳನ್ನು ಅಳವಡಿಸುವುದು ಕಾನೂನುಬಾಹಿರ ಎಂದು ಆರ್‌ಟಿಒ ಎಚ್ಚರಿಸಿದೆ.
ಮಂಗಳೂರು ನಗರ ಪ್ರದೇಶದಲ್ಲಿ ಓಡಾಡುವ ಕೆಲವು ಆಟೊರಿಕ್ಷಾಗಳ ಹಿಂಬದಿ ಯಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಈ ರೀತಿ ಜಾಹೀರಾತು ಅಳವಡಿಸಿರುವುದು ಕಾನೂನುಬಾಹಿರ ವಾಗಿದ್ದು, ಅದನ್ನು ತೆರವುಗೊಳಿಸದಿದ್ದರೆ ಪರವಾನಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರ್‌ಟಿಒ ಎಚ್ಚರಿಕೆ ನೀಡಿದೆ. ಇಂತಹ ಕಾನೂನುಬಾಹಿರ ಜಾಹೀರಾತುಗಳಿಂದ ರಸ್ತೆ ಸುರಕ್ಷತೆಗೆ ತೊಂದರೆ ಯಾಗುತ್ತಿದೆ. ಈ ಬಗ್ಗೆ ವಾಹನ ತನಿಖೆ/ತಪಾಸಣೆ ಕೈಗೊಳ್ಳಲಾಗುವುದು. ಪ್ರಾದೇ ಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವ ತನಕ ಇಂತಹ ಜಾಹೀರಾತು ಅಳವಡಿಸಬಾರದೆಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಉಪ ಸಾರಿಗೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News