ಗೃಹಿಣಿಯ ನಿಗೂಢ ಸಾವು: ಪತಿಯ ಬಂಧನ

Update: 2016-10-23 18:24 GMT

ಕಾಸರಗೋಡು, ಅ.23: ಗೃಹಿಣಿಯ ನಿಗೂಢ ಸಾವಿಗೆ ಸಂಬಂಧಪಟ್ಟಂತೆ ಆಕೆಯ ಪತಿಯನ್ನು ಬಂಧಿಸಿ, ಅತ್ತೆ ಮತ್ತು ಮನೆಯವರ ವಿರುದ್ಧ ಕೇಸು ದಾಖಲಿಸಿದ ಘಟನೆ ಕಾಸರಗೋಡಿನ ಬೆದ್ರಡ್ಕದಲ್ಲಿ ನಡೆದಿದೆ.
 ಮೃತಪಟವರನ್ನು ಫಾಯಿಝಾ(25) ಎಂದು ಗುರುತಿಸಲಾಗಿದೆ.

ಪತಿ ಕಾಸರಗೋಡು ಕಂಬಾರ್ ಬೆದ್ರಡ್ಕದ ಸಾದಿಕ್(25) ಎಂಬಾತ ಬಂಧಿತನಾಗಿದ್ದು, ಸಾದಿಕ್‌ನ ತಾಯಿ ಆಸ್ಯಮ್ಮ (45), ರುಬಿನಾ (30) ಮತ್ತು ಸುನಿನತ್(27) ಎಂಬವರ ವಿರುದ್ಧ ಪ್ರಕರಣ ದಾಖ ಲಿಸಲಾಗಿದೆ.

ಅ.21ರಂದು ಸಂಜೆ ಘಟನೆ ನಡೆದಿದ್ದು,ಗಂಭೀರ ಸ್ಥಿತಿಯಲ್ಲಿದ್ದ ಫಾಯಿಝಾರನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಅವರು ಮೃತ ಪಟ್ಟಿದ್ದರು. ಫಾಯಿಝಾರ ಮನೆ ಯವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾದಿಕ್ ಹಾಗೂ ಮನೆಯವರು ಆಸ್ಪತ್ರೆಯಿಂದ ಪರಾರಿ ಯಾಗಿದ್ದರು ಎಂದು ತಿಳಿದು ಬಂದಿದೆ.

ಫಾಯಿಝಾರ ನಿಗೂಢ ಸಾವಿನ ಬಗ್ಗೆ ಸಂಶಯ ತಲೆದೋರಿದ ಪರಿಣಾಮ ಮೃತದೇಹವನ್ನು ಪೆರಿ ಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಐದು ತಿಂಗಳ ಗರ್ಭಿಣಿಯಾಗಿದ್ದ ಫಾಯಿಝಾರ ಹೊಟ್ಟೆಯಲ್ಲಿದ್ದ ಶಿಶು ಮೃತಪಟ್ಟಿದೆ. ರಕ್ತಸ್ರಾವ ಉಂಟಾಗಿತ್ತು ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದು ಬಂದಿದೆ. ಆದರೆ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೂರ್ಣ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವಷ್ಟೇ ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ವರದಕ್ಷಿಣೆ ಕಿರುಕುಳಕ್ಕೆ ಸಂಬಂಧ ಪಟ್ಟಂತೆ 2012ರಲ್ಲಿ ಫಾಯಿಝಾರ ದೂರಿನ ಹಿನ್ನೆಲೆಯಲ್ಲಿ ಕಾಸರಗೋಡು ನ್ಯಾಯಾಲಯದ ಆದೇಶದಂತೆ ಪತಿ ಸಾದಿಕ್ ಮನೆಯವರ ವಿರುದ್ಧ ಕಾಸರಗೋಡು ಪೊಲೀಸರು ಮೊಕದ್ದಮೆ ಹೂಡಿದ್ದರು.

ವಿಚಾರಣೆ ನಡೆಯುತ್ತಿದ್ದಂತೆ ಎರಡೂ ಮನೆ ಯವರ ಒಪ್ಪಂದದಂತೆ ಮತ್ತೆ ಫಾಯಿಝಾ ಪತಿ ಮನೆಗೆ ಬಂದಿದ್ದರು. ಬಳಿಕವೂ ಕಿರುಕುಳ ನೀಡ ಲಾಗುತ್ತಿತ್ತು ಎಂದು ತಾಯಿ ಮನೆಗೆ ತಿಳಿಸಿದ್ದರು.

ಆಹಾರ ಕೂಡ ನೀಡದೆ ಕಿರುಕುಳ ನೀಡು ತ್ತಿದ್ದುದಾಗಿ ಅವರು ಸಂಬಂಧಿಕರಲ್ಲಿ ಹೇಳಿಕೊಂಡಿ ದ್ದರು ಎಂದು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪತಿ ಸಾದಿಕ್ ಮತ್ತು ಮನೆಯವರಿಂದ ಮಾಹಿತಿ ಪಡೆದಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡು ಸಾದಿಕ್‌ನನ್ನು ಬಂಧಿಸಿದ್ದಾರೆ. ವರದಕ್ಷಿಣೆ ಕಿರು ಕುಳದಿಂದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News