ಇಂದಿನ ಕಾರ್ಯಕ್ರಮ

Update: 2016-10-25 18:21 GMT

ಉಡುಪಿ ಜಿಲ್ಲೆ
ಕಾಲುಬಾಯಿ ಲಸಿಕಾ ಕಾರ್ಯಕ್ರಮ: ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 11ನೆ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಸಚಿವ ಪ್ರಮೋದ್ ಮಧ್ವರಾಜ್‌ರಿಂದ. ಸಮಯ: ಬೆಳಗ್ಗೆ 9:30ಕ್ಕೆ. ಸ್ಥಳ: ಸಚಿವರ ನಿವಾಸ, ಕೊಳಲಗಿರಿ ಅಮ್ಮುಂಜೆ. *ತರಬೇತಿ ಸಮಾರೋಪ: ಉಡುಪಿ ಜಿಲ್ಲಾ ಗೃಹರಕ್ಷಕ ದಳದಲ್ಲಿ 2016-17ನೆ ಸಾಲಿನಲ್ಲಿ ನೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭ. ಸಮಯ: ಸಂಜೆ 4ಕ್ಕೆ. ಸ್ಥಳ: ಪೊಲೀಸ್ ಚಂದು ಮೈದಾನ, ಉಡುಪಿ.
*ಪೇಜಾವರ ಶ್ರೀಗಳ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ಗುರುರಾಜ ಆಚಾರ್ಯ ಗುಡಿ ಇವರಿಂದ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7ರಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News