ಕಾಸರಗೋಡು: ಪಡಿತರ ಚೀಟಿ ಗೊಂದಲ

Update: 2016-10-25 18:25 GMT


 ಕಾಸರಗೋಡು, ಅ.25: ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿ ವಿತರಣೆಗೆ ತಯಾರಿಸಲಾದ ಕರಡುಪಟ್ಟಿ ಬಿಡುಗಡೆಗೊಳಿಸಿದ್ದು, ಸಾಕಷ್ಟು ತಪ್ಪುಗಳು ನುಸುಳಿಕೊಂಡಿವೆ ಅದರೊಂದಿಗೆ ಅರ್ಹ ಬಿಪಿಎಲ್ ಫಲಾನುಭವಿಗಳು ಹೊರಗುಳಿದಿದ್ದಾರೆ. ಬಿಪಿಎಲ್ ಫಲಾನುಭವಿಗಳು ಎಪಿಎಲ್ ಆಗಿ ಬದಲಾದರೆ ಎಪಿಎಲ್ ಫಲಾನುಭವಿಗಳು ಬಿಪಿಎಲ್ ಪಟ್ಟಿಯಲ್ಲಿದ್ದಾರೆ. ದುದದ್ರಷ್ಟವೆಂದರೆ ಎರಡಂತಸ್ತಿನ ಮನೆ, ಎರಡು ಕಾರು ಲಕ್ಷಾಂತರ ರೂ. ಆದಾಯ ಹೊಂದಿದವರು ಬಿಪಿಎಲ್ ಪಟ್ಟಿಯಲ್ಲಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಗೆ ಫಲಾನುಭವಿಗಳನ್ನು ಸುಸ್ತಾಗುವಂತೆ ಮಾಡಿದೆ. ಇದೀಗ ಲೋಪವಿದ್ದಲ್ಲಿ ಮತ್ತೆ ಅರ್ಜಿ ಸಲ್ಲಿಸಬೇಕಿದ್ದು, ಅ.31ರೊಳಗೆ ನೀಡುವ  
ಂತೆ ಇಲಾಖೆ ತಿಳಿಸಿದೆ. ಆದರೆ ಒಂದು ವಾರದ ಕಾಲಾವಧಿ ಮಾತ್ರ ನೀಡಿದ್ದು, ಈ ಅವಧಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಎಲ್ಲ ಫಲಾನುಭವಿಗಳಿಗೆ ಅಸಾಧ್ಯವಾಗಿದೆ. ಅಲ್ಲದೆ ಎಪಿಎಲ್‌ನವರು ಬಿಪಿಎಲ್ ಪಟ್ಟಿಗೆ ಸೇರ್ಪಡೆಗೊಳ್ಳಲು ಹಲವು ದಾಖಲೆಗಳನ್ನು ಸಲ್ಲಿಸಬೇಕಿದ್ದು, ಗ್ರಾಮ ಕಚೇರಿ ಹಾಗೂ ಮತ್ತಿತರ ಕಚೇರಿಗಳಿಂದ ದಾಖಲೆಗಳು ಲಭಿಸಲು ಹಲವು ದಿನಗಳೇ ಬೇಕು. ಇದು ಫಲಾನುಭವಿಗಳಿಗೆ ತೀವ್ರ ತೊಂದರೆ ಅನುಭವಿಸುವಂತೆ ಮಾಡಿದೆ.
  ಒಂದು ಸಾವಿರ ಚದರಡಿಗಿಂತ ಕೆಳಗಿನ ಮನೆ ಹೊಂದಿದದವರು, ಒಂದು ಎಕರೆಗಿಂತ ಕಡಿಮೆ ಸ್ಥಳ ಹೊಂದಿದವರು. ಸರಕಾರಿ ಉದ್ಯೋಗ ಇಲ್ಲದವರು ಬಿಪಿಎಲ್ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಿದೆ. ಆದರೆ ಉದ್ಯೋಗಿಗಳು, ವಾಹನ ಹೊಂದಿದವರು, ಸಾರ್ವಜನಿಕ ವಲಯದ ನೌಕರರು, ಆದಾಯ ತೆರಿಗೆ ಪಾವತಿಸುವವರು ತಪ್ಪು ಮಾಹಿತಿ ನೀಡಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಕುರಿತು ದೂರು ಬಂದಲ್ಲಿ ಇಂತಹ ಫಲಾನುಭವಿಗಳನ್ನು ಬಿಪಿಎಲ್ ಪಟ್ಟಿಯಿಂದ ತೆರವುಗೊಳಿಸಲಾಗುವುದು. ದೂರು ನೀಡಲು ಮುಂದಾಗಿರುವುದು ಅರ್ಹರ ಸವಲತ್ತುಗಳನ್ನು ದೋಚಲಾಗುತ್ತಿದೆ. ಪಡಿತರ ವ್ಯವಸ್ಥೆಯಲ್ಲಿನ ಗೊಂದಲ ಗ್ರಾಹಕರಿಗೆ ಅಗ್ನಿ ಪರೀಕ್ಷೆ ಮಾಡಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News