ಕಟ್ಟಡ ಮಾಲಕ ನಿರ್ಲಕ್ಷದಿಂದ ತ್ಯಾಜ್ಯ ನೀರು ಸೋರಿಕೆ

Update: 2016-10-25 18:48 GMT


ಮುಲ್ಕಿ, ಅ.25: ಇಲ್ಲಿನ ಖಾಸಗಿ ಕಟ್ಟಡ ಮಾಲಕರ ನಿರ್ಲಕ್ಷದಿಂದ ಮಂಗಳವಾರ ಶೌಚಾಲಯದ ಮಲಿನ ನೀರು ಸೋರಿಕೆಯಾಗಿ ಪರಿಸರವಿಡೀ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿ ಯಾಗಿದೆ ಎಂದು ಆರೋಪಿಸಿ ನಪಂಗೆ ದೂರು ನೀಡಲಾಗಿದೆ.

ಮುಲ್ಕಿ ಬಿಲ್ಲವ ಸಂಘದ ಬಳಿಯ ಖಾಸಗಿ ಕಟ್ಟಡ ಮಾಲಕರು ತಮ್ಮ ಕಟ್ಟಡಲ್ಲಿ ಸಾಮರ್ಥ್ಯ ಮೀರಿ ವಿದ್ಯಾರ್ಥಿ ನಿಲಯಕ್ಕೆ ಅನುಮತಿ ನೀಡಿದ್ದು ಇದ ರಿಂದ ಸೂಕ್ತ ಸೌಲಭ್ಯವಿಲ್ಲದೆ ಶೌಚಾ ಲಯದ ಒಳಚರಂಡಿ ವ್ಯವಸ್ಥೆ ಸರಿ ಯಾಗಿಲ್ಲದೆ ಪಿಟ್ ತುಂಬಿ ಮಲಿನ ನೀರು ಸೋರಿಕೆಯಾಗಿ ರಸ್ತೆಯಲ್ಲಿ ಹರಿ ಯಲಾರಂಭಿಸಿದೆ ಎಂದು ಆರೋಪಿಸ ಲಾಗಿದೆ. ಏಕಾಏಕಿ ಮಲಿನ ನೀರು ಸೋರಿಕೆಯಿಂದ ಪರಿಸರವಿಡೀ ದುರ್ವಾ ಸನೆ ಬೀರುತ್ತಿದೆ ಎಂದು ದೂರು ನೀಡಿ ರುವ ಸ್ಥಳೀಯರು ಮತ್ತು ಸಮೀಪದ ಅಂಗಡಿ ಮಾಲಕರು ಈ ಸಂಬಂಧ ಮುಲ್ಕಿ ನಪಂಗೆ ದೂರು ನೀಡಿದ್ದಾರೆ.

ಕಟ್ಟಡ ಮಾಲಕನ ವಿರುದ್ಧ ಕ್ರಮಕ್ಕೆ ಅಗ್ರಹ

ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸದೆ ನಿಯಮ ಬಾಹಿರವಾಗಿ ಸಾಮರ್ಥ್ಯ ಮೀರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದ್ದಾರೆಂದು ಆರೋಪಿಸಿ ಮುಲ್ಕಿಯ ಖಾಸಗಿ ಕಟ್ಟಡದ ಮಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News