ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸ್ಥಾಪನೆ

Update: 2016-10-26 14:58 GMT

ಮಂಗಳೂರು, ಅ.26: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಹಾಗೂ ಜಗತ್ತಿನಾದ್ಯಂತ ವ್ಯಾಪಾರೋದ್ಯಮದಲ್ಲಿ ಭಾಗಿದಾರರಾಗಿರುವ ಬ್ಯಾರಿ ಭಾಷೆಯನ್ನು ಮಾತನಾಡುವ ಸದಸ್ಯರು ಸೇರಿ ಸಮುದಾಯದ ಸದಸ್ಯರ ಹಾಗೂ ದೇಶದ ಶ್ರೇಯೋಭಿವೃದ್ಧಿಗಾಗಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಜಗತ್ತಿನಾದ್ಯಂತ ಬ್ಯಾರಿ ಸಮುದಾಯದ ನುರಿತ ಖ್ಯಾತ ಉದ್ಯಮಿಗಳು, ಕಾನೂನು, ಶಿಕ್ಷಣ, ಆರ್ಥಿಕ ತಜ್ಞರು, ತಾಂತ್ರಿಕ ನಿಪುಣರು, ವಿಜ್ಞಾನಿಗಳು, ವ್ಯಾಪಾರಿಗಳು, ಯುವ ಉದ್ಯಮಿಗಳು, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನೂ ಗುರುತಿಸಿ ಒಂದೇ ವೇದಿಕೆಯಡಿಗೆ ತಂದು ಅವರಿಂದ ಸಮುದಾಯದ ಇತರ ಸದಸ್ಯರಿಗೆ, ದೇಶಬಾಂಧವರಿಗೆ ಹಾಗೂ ದೇಶಕ್ಕೆ ಲಾಭವಾಗುವ ಹಿತದೃಷ್ಟಿಯಿಂದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಉದ್ಯಮಿಗಳೆಲ್ಲ ಒಂದೆಡೆ ಸೇರಿ ಸಮಾಲೋಚನೆ ನಡೆಸಿ ತಮ್ಮ ಆಗ್ರಹಗಳನ್ನು ಸರಕಾರಕ್ಕೆ ತಲುಪಿಸುವುದು ಹಾಗೂ ಭಾರತದಲ್ಲಿ ಹೆಚ್ಚೆಚ್ಚು ಕಾರ್ಯೋನ್ಮುಖರಾಗಲು ಉತ್ತೇಜಿಸುವುದು ಈ ಸಂಸ್ಥೆಯ ಮುಖ್ಯ ಧ್ಯೇಯೋದ್ದೇಶವಾಗಿದೆ. ಸಂಸ್ಥೆಯು ಇತ್ತೀಚೆಗೆ ನೋಂದಣಿಗೊಂಡಿದ್ದು, ಶೀಘ್ರದಲ್ಲಿ ನಾಡಿನ ಗಣ್ಯರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ.

 ಸಂಸ್ಥೆಯ ಸ್ಥಾಪಕರ ಪ್ರಥಮ ಸಭೆಯಲ್ಲಿ ಅಧ್ಯಕ್ಷರಾಗಿ ಹಾಜಿ ಎಸ್.ಎಂ. ರಶೀದ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಜ್ಪೆ ಝಕರಿಯ್ಯ, ಅಬ್ದುಲ್ ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಮ್ತಿಯಾಝ್ ಕೆ.ಎ., ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಶ್ರಫ್ ಹಾಗೂ ನಿಸಾರ್ ಫಕೀರ್ ಮುಹಮ್ಮದ್, ಕೋಶಾಧಿಕಾರಿಯಾಗಿ ಮನ್ಸೂರ್ ಅಹ್ಮದ್ ಮತ್ತು ಹಣಕಾಸು ಸಲಹೆಗಾರರನ್ನಾಗಿ ಸಿಎ ಜಮೀರ್ ಅಂಬರ್‌ರನ್ನು ಆಯ್ಕೆ ಮಾಡಲಾಯಿತು.

ಸ್ಥಾಪಕ ಸದಸ್ಯರನ್ನಾಗಿ ರಿಯಾಝ್ ಬಾವ, ಡಾ. ಯು.ಟಿ. ಇಫ್ತಿಕಾರ್ ಅಲಿ, ಮುಹಮ್ಮದ್ ಹಾರಿಸ್, ಬಿ.ಎಂ. ಮುಮ್ತಾಝ್ ಅಲಿ, ಮುಹಮ್ಮದ್ ಖಾಸಿಂ, ಎ.ಕೆ. ನಿಯಾಝ್, ಮುಹಮ್ಮದ್ ಶೌಕತ್ ಶೌರಿ, ಅಬ್ದುಲ್ ಬಶೀರ್ ರಿಯಾದ್, ಮುಹಮ್ಮದ್ ಶರೀಫ್ ಎಂ., ಗೋಳ್ತಮಜಲು ಅಬ್ದುರ್ರಝಾಕ್, ಅಬ್ದುಲ್ಲ ಮೊಯ್ದಿನ್ ಮೋನು ಕತರ್, ಮುಹಮ್ಮದ್ ಅಲಿ ಉಚ್ಚಿಲ ಅಬುಧಾಬಿ, ಜಮಾಲುದ್ದೀನ್ ಉಡುಪಿ ಹಾಗೂ ಎ.ಎಚ್. ಮುಹಮ್ಮದ್‌ರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News