ನಿಷೇಧಿತ ಪಾನ್ ಉತ್ಪನ್ನ ವಶ : ಸಾಗಾಟದ ಮುಖ್ಯ ಏಜೆಂಟ್ ಬಂಧನ

Update: 2016-10-31 14:36 GMT

ಮಂಜೇಶ್ವರ,ಅ.31: ಕೇರಳದಲ್ಲಿ ನಿಷೇಧಿಸಲಾದ ಪಾನ್ ಉತ್ಪನ್ನಗಳನ್ನು ಕಾಸರಗೋಡಿನ ವಿವಿಧೆಡೆಗೆ ಪೂರೈಸುತ್ತಿದ್ದ ಮುಖ್ಯ ಏಜೆಂಟ್‌ನನ್ನು ಬದಿಯಡ್ಕ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಉಕ್ಕಿನಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ ಕುಂಞಿ (57) ಬಂಧಿತ ವ್ಯಕ್ತಿಯಾಗಿದ್ದು, ಈತನಿಂದ ವಿವಿಧ ಹೆಸರಿನ ನಿಷೇಧಿತ 10,360 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬದಿಯಡ್ಕ ಅಡಿಶನಲ್ ಎಸ್.ಐ ಎನ್.ಕೆ. ಬಾಲಕೃಷ್ಣನ್‌ರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ದಾಳಿ ನಡೆದಿದೆ.

     ಕರ್ನಾಟಕದಿಂದ ಬೈಕ್‌ನಲ್ಲಿ ಪಾನ್ ಉತ್ಪನ್ನಗಳನ್ನು ತರುವ ಅಬ್ದುಲ್ಲ ಕುಂಞಿ, ಉಕ್ಕಿನಡ್ಕದ ಬಾಡಿಗೆ ಕೋಣೆಯಲ್ಲಿ ದಾಸ್ತಾನು ಮಾಡಿ ವ್ಯವಹಾರ ನಡೆಸುತ್ತಿದ್ದನು. ಅಲ್ಲಿಂದ ವಿವಿಧ ಅಂಗಡಿಗಳಿಗೆ ಪೂರೈಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತ ಪಾನ್ ಉತ್ಪನ್ನಗಳನ್ನು ಪೂರೈಸುತ್ತಿದ್ದ ಅಂಗಡಿಗಳ ಮಾಹಿತಿ ಲಭಿಸಿದೆಯೆಂದೂ, ಈ ಅಂಗಡಿಗಳ ಬಗ್ಗೆ ನಿಗಾ ಇರಿಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಅಬ್ದುಲ್ಲ ಕುಂಞಿ ಹಾಗೂ ಇನ್ನೋರ್ವನನ್ನು ಪಾನ್ ಉತ್ಪನ್ನಗಳೊಂದಿಗೆ ಬದಿಯಡ್ಕ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಕರ್ನಾಟಕದಿಂದ ಕೇರಳಕ್ಕೆ ನಿಷೇಧಿತ ಪಾನ್ ಉತ್ಪನ್ನಗಳನ್ನು ಸಾಗಿಸುವ ಬಹತ್ ತಂಡವೇ ಕಾರ್ಯಾಚರಿಸುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದ ಮಾರುಕಟ್ಟೆ ಬೆಲೆಯ ಹತ್ತು ಪಾಲು ಬೆಲೆಯಲ್ಲಿ ಕೇರಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಮರಳು, ಕೋಳಿ ಸಾಗಾಟದಂತೆಯೇ ಪಾನ್ ಉತ್ಪನ್ನಗಳ ಸಾಗಾಟವೂ ಗಡಿ ಪ್ರದೇಶದಲ್ಲಿ ವ್ಯಾಪಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News