ಪಡುಬಿದ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Update: 2016-11-01 13:21 GMT

ಪಡುಬಿದ್ರೆ, ನ.1: ನಮ್ಮ ದೇಶದ ನೆಲ, ಜಲ ಪರಿಸರವನ್ನು ರಕ್ಷಿಸುವ ಕೆಲಸ ನಮ್ಮಿಂದಾಗಬೇಕಾಗಿದೆ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ ಹೇಳಿದ್ದಾರೆ.

ಅವರು ಪಡುಬಿದ್ರೆಯ ಜೈ ಕರ್ನಾಟಕ ವತಿಯಿಂದ ಪಡುಬಿದ್ರೆ ಟೆಂಪೊ ನಿಲ್ದಾಣದ ಬಳಿ ಜರಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡ ನಮ್ಮ ದೇಶದಲ್ಲಿ ಸೌಹಾರ್ದ ಬಾಂಧವ್ಯದೊಂದಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರ್ನಾಟಕವನ್ನು ಬೆಳೆಸಬೇಕು ಎಂದು ಹೇಳಿದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ, ಭಯೋತ್ಪಾದನೆ, ಗಡಿ, ನಕ್ಸಲ್ ಮತ್ತು ಉದ್ಯೋಗ ಸಮಸ್ಯೆಗಳನ್ನು ಎದುರಿಸಲು ಜಾತಿ, ಧರ್ಮ, ಮತ ಪಂಥವನ್ನು ಬದಿಗಿಟ್ಟು ಭಾರತೀಯರಾಗಿ ನಾವು ಹೋರಾಟ ನಡೆಸಬೇಕು. ದೇಶದ ಸಮಸ್ಯೆ ನಮ್ಮೆಲ್ಲರ ಸಮಸ್ಯೆ ಎಂದರು.

ಪಡುಬಿದ್ರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ.ಸುಕುಮಾರ್ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯತ್ ಸದಸ್ಯೆ ನೀತಾಗುರುರಾಜ್, ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಜೈ ಕರ್ನಾಟಕ ಪಡುಬಿದ್ರೆ ಘಟಕದ ಗೌರವಾಧ್ಯಕ್ಷ ಶಬ್ಬೀರ್ ಹುಸೇನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಉಡುಪಿ, ಉದ್ಯಮಿ ಮಿಥುನ್ ಹೆಗ್ಡೆ, ಬಜರಂಗದಳ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಆಚಾರ್ಯ, ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರೆ, ದಲಿತ ಮುಖಂಡ ಲೋಕೇಶ್ ಅಂಚನ್, ಅಧ್ಯಕ್ಷ ಸಿ.ಪಿ.ಅಬ್ದುರ್ರಹ್ಮಾನ್, ಉಪಾಧ್ಯಕ್ಷ ಜಮಾಲ್, ಜಯಕರ್ನಾಟಕದ ಶಶಿಕಾಂತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News