ಗ್ರಾಪಂ ಕಚೇರಿಯಲ್ಲಿ ಚಕಮಕಿ; ನೀರಿನ ಡ್ರಮ್ ಧ್ವಂಸ: ಪೊಲೀಸರಿಗೆ ದೂರು

Update: 2016-11-04 18:48 GMT

ಪುತ್ತೂರು, ನ.4: ಬ್ಯಾನರ್ ಅಳವಡಿಸಲು ಪರವಾನಿಗೆ ಹಾಗೂ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲು ಗ್ರಾಪಂಗೆ ತೆರಳಿದ ಐವರು ಯುವಕರು ಗ್ರಾಪಂ ಕಚೇರಿಯಲ್ಲಿ ಪಿಡಿಒ ಜೊತೆ ಮಾತಿನ ಚಕಮಕಿ ನಡೆಸಿ ಕಚೇರಿಯಲ್ಲಿ ಕುಡಿಯುವ ನೀರಿನ ಮಣ್ಣಿನ ಹೂಜಿಯನ್ನು ಧ್ವಂಸ ಮಾಡಿರುವ ಘಟನೆ ಶುಕ್ರವಾರ ಬಡಗನ್ನೂರು ಗ್ರಾಪಂ ಕಚೇರಿಯಲ್ಲಿ ನಡೆದಿದೆ.

ಗ್ರಾಮದ ಹೊಸನಗರ ನಿವಾಸಿಗಳಾದ ಶಾಫಿ, ಸಾಕ್, ಸಮದ್, ಇಕ್ಬಾಲ್ ಮತ್ತು ತುಘಲಕ್ ಎಂಬವರು ಗ್ರಾಪಂ ಕಚೇರಿಗೆ ತೆರಳಿದ್ದರು. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ತಮಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.ಅರ್ಜಿ ಸ್ವೀಕರಿಸಿದ ಪಿಡಿಒ ಶಾರದಾ ಅರ್ಜಿ ಜೊತೆಗೆ ಪೋಸ್ಟಲ್ ಆರ್ಡರ್ ಲಗತ್ತಿಸಬೇಕು ಎಂದು ಹೇಳಿದ್ದಾರೆ. ಇದನ್ನು ಆಕ್ಷೇಪಿಸಿದ ಯುವಕರು ಪಿಡಿಒ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮಣ್ಣಿನ ಹೂಜಿಯನ್ನು ತಂಡ ಧ್ವಂಸ ಮಾಡಿದೆ ಎಂದು ದೂರಲಾಗಿದೆ.

ಈ ಕುರಿತು ಪಿಡಿಒ ಈಶ್ವರಮಂಗಲ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News