ತನ್ವೀರ್ ಸೇಠ್ ಪ್ರಕರಣ ಕುರಿತು ಪಕ್ಷದ ಮುಖಂಡರು ವರದಿ ಕೇಳಿದ್ದಾರೆ: ಸಚಿವ ಯು.ಟಿ.ಖಾದರ್‌

Update: 2016-11-11 09:01 GMT

ಮಂಗಳೂರು,ನ.11:ಸಚಿವ ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ವರದಿ ಕೇಳಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರವಾಗಬಹುದು ಎಂದು ರಾಜ್ಯ ಆರೋಗ್ಯ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೊಕ್ಕೊಟ್ಟು ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಗುರುವಾರ ಕುತ್ತಾರು ಬಳಿ ರಾಮ್ ಮೋಹನ್ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯ ಯತ್ನವನ್ನು ಖಂಡಿಸಿದ ಸಚಿವರು, ಅಗತ್ಯವಿದ್ದರೆ ರಾಜ್ಯದಿಂದ ವಿಶೇಷ ತನಿಖಾ ತಂಡವನ್ನು ಪತ್ತೆ ಕಾರ್ಯಕ್ಕೆ ಬಳಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ದೇಶದಲ್ಲಿ 1000 ಹಾಗೂ 500 ರೂ ನೋಟುಗಳನ್ನು ಸರಕಾರ ಅಮಾನ್ಯ ಗೊಳಿಸಿರುವುದರಿಂದ ಪಡಿತರ ವ್ಯವಸ್ಥೆಗೆ ಸಮಸ್ಯೆಯಾಗಿಲ್ಲ. ಈಕ್ರಮದಿಂದ ದೇಶದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News