ಡಿ.11ರಂದು ಇಎನ್‌ಟಿ ತಜ್ಞರಿಂದ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ

Update: 2016-11-11 15:35 GMT

ಮಂಗಳೂರು, ನ.11: ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಮತ್ತು ನಸೀಮಾ ಕೊಚ್ಹಿಲರ್ ಇಂಪ್ಲಾಂಟ್ ಸೆಂಟರ್ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಕಿವಿ, ಮೂಗು, ಗಂಟಲು ತಜ್ಞ ಡಾ. ದೀಪಕ್ ಹಳದಿಪೂರ್‌ರ ನೇತೃತ್ವದಲ್ಲಿ ತಪಾಸಣಾ ಶಿಬಿರ ಮತ್ತು ಶ್ರವಣ ಸಾಧನ ವಿತರಣೆ ಕಾರ್ಯಕ್ರಮವು ಡಿಸೆಂಬರ್ 11ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಶ್ರವಣ ದೋಷದಿಂದಾಗುವ ತೊಂದರೆಯನ್ನು ಮನಗಂಡ ಎರಡು ಸಂಸ್ಥೆಗಳು ಜಂಟಿಯಾಗಿ ಕಾರ್ಯ ಯೋಜನೆಗೆ ಚಾಲನೆ ನೀಡಿದೆ. ಪ್ರಾರಂಭಿಕ ಹಂತದಲ್ಲಿ 50 ಮಂದಿಯನ್ನು ಗುರುತಿಸಿ ಅವರಿಗೆ ಉಚಿತ ಶ್ರವಣ ಯಂತ್ರವನ್ನು ವಿತರಿಸಲಾಗುವುದು ಹಾಗೂ ಸಂಪೂರ್ಣ ಶ್ರವಣಾ ದೋಷವಿರುವ ಸುಮಾರು 300 ಮಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ಸರ್ಜರಿ ಮಾಡಲಾಗುವುದು ಎಂದು ಅವರು ವಿವರಿಸಿದರು. 5 ವರ್ಷದೊಳಗಿನ ಬಿಪಿಎಲ್ ಪಡಿತರರದಾರ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡಲಾಗುವುದು. 5 ವರ್ಷದಿಂದ 7 ವರ್ಷದೊಳಗಿನ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದವರು ತಿಳಿಸಿದರು.

ಶಿಬಿರದಲ್ಲಿ ಬಿಪಿಎಲ್ ಪಡಿತರದಾರ ಶ್ರವಣದೋಷವುಳ್ಳರಿಗೆ ಶ್ರವಣ ಸಾಧನದ 50 ಕಿಟ್‌ನ್ನು ಹೆಲ್ಪ್ ಇಂಡಿಯಾ ಫೌಂಡೇಶನ್‌ನಿಂದ ವಿತರಿಸಲಾಗುವುದು. ಇದರಲ್ಲಿ ಬಡ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಶ್ರವಣ ದೋಷವುಳ್ಳವರು ತೊಕ್ಕೊಟ್ಟಿನ ಎಚ್.ಎಸ್. ಟವರ್‌ನ ಮೊದಲ ಮಹಡಿಯಲ್ಲಿರುವ ಹೆಲ್ಪ್ ಇಂಡಿಯಾ ಫೌಂಡೇಶನ್‌ಗೆ ಅರ್ಜಿ ಸಲ್ಲಿಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8867110000, 8050507800, 8050587800ಗಳನ್ನು ಸಂಪರ್ಕಿಸಬಹುದು ಎಂದು ಫೌಂಡೇಶನ್‌ನ ಪತ್ರಿಕಾ ಕಾರ್ಯದರ್ಶಿ ಝಾಕಿರ್ ಇಖ್ಲಾಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಇಎನ್‌ಟಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ದೀಪಕ್ ಹಳದಿಪೂರ್, ಡಾ.ಝುಲ್ಪಿಕರ್, ಹೆಲ್ಪ್ ಇಂಡಿಯಾ ಸ್ಥಾಪಕ ಪ್ರಧಾನ ಕಾರ್ಯದರ್ಶಿ ರಾಝಿಕ್ ಉಳ್ಳಾಲ, ಡಾ.ಪ್ರಕಾಶ್ ಶೆಟ್ಟಿ, ಸಿರಾಜ್ ಅಭಯ, ಸುಲೈಮಾನ್ ಶಕೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News