ನಿಯಂತ್ರಣ ತಪ್ಪಿ ಕಾರು ಪಲ್ಟಿ

Update: 2016-11-13 16:34 GMT

ಮುಲ್ಕಿ,ನ.13: ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಅಪಾಯಕಾರಿ ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿಚರಂಡಿಗೆ ಬಿದ್ದು ದಂಪತಿ ಅಪಾಯದಿಂದ ಪಾರಾದ ಘಟನೆ ರವಿವಾರ ಸಂಜೆ ನಡೆದಿದೆ.

ಅಂಕೋಲಾ ಮೂಲದ ಪರಮೇಶ ದಂಪತಿ ತಾವು ಆಗ ತಾನೆ ಖರೀದಿಸಿದ ಹೊಚ್ಚ ಹೊಸ ಕಾರಿನೊಂದಿಗೆ ಮೂಡಬಿದ್ರೆಯ ಆಳ್ವಾಸಿನಲ್ಲಿ ಕಲಿಯುತ್ತಿರುವ ಮಗನನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಕೆಂಚನಕೆರೆ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಂಯತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಧಾವಿಸಿ ಕಾರಿನೊಳಗೆ ಸಿಲುಕಿ ಒದ್ದಾಡುತ್ತಿದ್ದ ಇಬ್ಬರನ್ನು ಹೊರತೆಗೆದಿದ್ದಾರೆ.

ಅಪಘಾತ ಪ್ರದೇಶವಾದ ಕೆಂಚನಕೆರೆ ಪರಿಸರದಲ್ಲಿ ದಾರಿದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕ ಬಾರಿ ಈ ಪ್ರದೇಶದಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು ಕತ್ತಲೆಯಲ್ಲಿ ಸ್ಥಳೀಯರನ್ನು ಅಪಾಯದಿಂದ ಕಾಪಾಡುವುದು ಸಾಹಸವೇ ಸರಿ ಎಂದ ಸ್ಥಳೀಯರು ಆನೇಕ ಬಾರಿ ದಾರಿದೀಪದ ಅವ್ಯವಸ್ಥೆ ಬಗ್ಗೆ ಪಂಚಾಯತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News