ಮೈಮ್ ರಮೇಶ್‌ರಿಗೆ ‘ಚಂದನ’ ಪ್ರಶಸ್ತಿ

Update: 2016-11-15 14:01 GMT

ಮಂಗಳೂರು, ನ.15: ರಂಗಭೂಮಿಯ ನಟ, ನಿರ್ದೇಶಕ, ರಂಗಾಯಣದ ಮೈಮ್ ರಮೇಶ್‌ರಿಗೆ ದೂರದರ್ಶನ ಚಂದನದ ನಾಟಕ ವಿಭಾಗದ ಪ್ರಶಸ್ತಿ ಲಭಿಸಿದೆ. ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಂದಿ ಸಾಧಕರಿಗೆ ಚಂದನ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಕಳೆದ 45 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ದುಡಿಯುತ್ತಿರುವ ಮೈಮ್ ರಮೇಶ್ ಅವರು ಮೈಸೂರು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದ ಮಂಗಳೂರು ಮತ್ತು ಕಾಸರಗೋಡು ನಗರದಲ್ಲಿ ರಂಗಭೂಮಿಯಲ್ಲಿ ದುಡಿದಿದ್ದಾರೆ.

 ಮೊದಲು ಯಕ್ಷಗಾನ, ಭರತನಾಟ್ಯ ಕಲಿತು 1975ರಲ್ಲಿ ಕಲಾಜಗತ್ತಿಗೆ ಪಾದಾರ್ಪಣೆ ಮಾಡಿದ ರಮೇಶ್‌ರಿಗೆ 46 ವರ್ಷಗಳಿಂದ ರಂಗಭೂಮಿಯೇ ಜೀವನ. 1989ರಲ್ಲಿ ಬಿ.ವಿ.ಕಾರಂತರು ಆರಂಭಿಸಿದ ಮೈಸೂರು ರಂಗಾಯಣದಲ್ಲಿ ಸೇರಿಕೊಂಡು ಶಿಕ್ಷಕ, ಕಲಾವಿದ, ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಜಿಪಿಐಇಆರ್ ಹವ್ಯಾಸಿ ರಂಗತಂಡ ಕಟ್ಟಿದ್ದಾರೆ.

ಮೊದಲಿಗೆ ತುಳುಭಾಷೆಯಲ್ಲಿ ನಾಗಮಂಡಲ ನಾಟಕವನ್ನು ನಿರ್ದೇಶನ ಮಾಡಿದವರು ಮೈಮ್ ರಮೇಶ್. ಚೆನ್ನೈನ ಸೌತ್ ಇಂಡಿಯನ್ ಫಿಲ್ಮ್ ಅಸೋಸಿಯೇಶನ್‌ನಿಂದ 1997ರಲ್ಲಿ ಕಲೈ ಸೆಲ್ವಂ ಬಿರುದು, ಕೇರಳ ಕಾಸರಗೋಡಿನಲ್ಲಿ ಕಡಲತಡಿಯ ಬಾರ್ಗವ ಶಿವರಾಮಕಾರಂತರಿಂದ ರಂಗಕರ್ಮಿ ಬಿರುದು ಪಡೆದಿರುವ ಮೈವ್ ರಮೇಶ್ ಅರ್ಜಿ ಹಾಕಿ ಪ್ರಶಸ್ತಿ ಪಡೆಯುವುದನ್ನು ತೀವ್ರವಾಗಿ ವಿರೋಧಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News