ನುಡಿಸಿರಿ ಕನ್ನಡಿಗರ ಕ್ರಿಯಾಶೀಲತೆಗೆ ತೆರೆದುಕೊಳ್ಳಲಿ: ಡಾ. ಸುಮಿತ್ರಾ ಬಾಯಿ

Update: 2016-11-20 20:51 IST
  • whatsapp icon

ಮೂಡುಬಿದಿರೆ, ನ.20: ದೇಶ-ವಿದೇಶದ ಸಾವಿರಾರು ಸಾಹಿತ್ಯಾಸಕ್ತರ, ಕಲಾಭಿಮಾನಿಗಳ ಹೃದಯ ಗೆದ್ದ ನುಡಿಸಿರಿಯು ಕನ್ನಡಿಗರ ಕ್ರಿಯಾಶೀಲತೆಗೆ ತೆರೆದುಕೊಳ್ಳಲಿ ಎಂದು ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಆಶಿಸಿದರು.

ಕಳೆದ ಮೂರು ದಿನದಿಂದ ನಡೆಯುತ್ತಿರುವ 13ನೆ ನುಡಿಸಿರಿಯ ಅಧ್ಯಕ್ಷತೆ ವಹಿಸಿದ್ದ ಅವರು ರವಿವಾರ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಯನ್ನಾಡಿದರು.

ಇಲ್ಲಿ ಸಾಹಿತ್ಯ, ಕಲೆ, ಧರ್ಮ, ರಾಜಕಾರಣ, ಕೃಷಿ ಇತ್ಯಾದಿಯ ಕುರಿತು ಅರ್ಥಪೂರ್ಣ ಚರ್ಚೆ ನಡೆದಿದೆ. ಹಿರಿ-ಕಿರಿಯರು ಯಾವುದೇ ನಿರ್ಬಂಧವಿಲ್ಲದೆ ತಮ್ಮ ಅನುವಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಲ್ಲಿ ಚರ್ಚಿತವಾದ ವಿಷಯಗಳು ಚಿಂತನೆಗೆ ಗ್ರಾಸ ಒದಗಿಸಿದೆ. ಇಲ್ಲಿ ಬಾಗವಹಿಸಿದ ಪ್ರತಿಯೊಬ್ಬರಿಗೂ ಅಪೂರ್ವ ಜೀವನಾನುವ ಲಭಿಸಿದೆ ಎಂದರೆ ತಪ್ಪಾಗಲಾರದು ಎಂದು ಡಾ. ಬಿ.ಎನ್. ಸುಮಿತ್ರಾ ಬಾಯಿ ಹೇಳಿದರು.

ಎಡ-ಬಲವಲ್ಲದ ಮಧ್ಯಮ ಮಾರ್ಗ ಹುಡುಕುವ ಧಾವಂತಕ್ಕೆ ನನ್ನ ಸಹಮತವಿದೆ. ಇದರಿಂದ ಹೊಸ ಚಿಂತನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಮಧ್ಯಮ ಮಾರ್ಗವು ವಿವಿಧ ಬಾಷೆ, ಧರ್ಮ, ಜಾತಿ, ಸಂಸ್ಕೃತಿ ಸಮ್ಮಿಲತವಾಗಿರುವ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಆಳ್ವಾಸ್ ಕ್ಯಾಂಪಸ್‌ನಿಂದಲೇ ಚಳವಳಿಯ ರೂಪುತಾಳಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News