ನಿಧನ: ಆನಂದ ಆಚಾರ್ಯ
Update: 2016-11-21 18:41 GMT
ಉಪ್ಪಿನಂಗಡಿ ನ.21: ಇಲ್ಲಿನ ರಾಮನಗರದ ಜನತಾ ಕಾಲನಿ ನಿವಾಸಿ ಬಿ.ಕೆ. ಆನಂದ ಆಚಾರ್ಯ(68) ಎಂಬವರು ರವಿವಾರ ಸಂಜೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ರಾಗಿದ್ದಾರೆ.
ಮೃತರು ಚಾಲಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರಸ್ತುತ ಆತೂರಿನ ಆಯಿಶಾ ವಿದ್ಯಾಸಂಸ್ಥೆಯ ಬಸ್ ಚಾಲಕರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಪ್ರಾಂಶುಪಾಲೆ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ತೆರಳಿ ಮೃತರ ಅಂತಿಮ ದರ್ಶನ ಪಡೆದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.