ವಿಷಯಾಧಾರಿತ ತರಬೇತಿ ಕಾರ್ಯಾಗಾರ

Update: 2016-11-24 13:49 GMT

ಉಡುಪಿ, ನ.24: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಕ್ಲಸ್ಟರ್ ಮಟ್ಟದ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಕನ್ನಡ ಹಾಗೂ ಇತಿಹಾಸ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಎಂಜಿಎಂ ಪದವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಲವರಾಜ್ ಇತ್ತೀಚೆಗೆ ಉದ್ಘಾಟಿಸಿದರು.

ತರಬೇತಿಗಳಿಂದ ಅಧ್ಯಾಪಕರ ಕೌಶಲ ವೃದ್ಧಿಯಾಗುತ್ತದೆ. ತರಬೇತಿ ಬೋಧನೆಗೆ ಪೂರಕವಾಗಿ, ಆಸಕ್ತಿದಾಯಕವಾಗುವುದಲ್ಲದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಪ್ರೊ.ಲವರಾಜ್ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ.ನಾಯಕ್ ಮಾತನಾಡಿ, ಉಪನ್ಯಾಸಕರು ವಿಷಯದ ಮೇಲೆ ಹೆಚ್ಚಿನ ನೈಪುಣ್ಯಕ್ಕಾಗಿ ತರಬೇತಿಗೆ ಆಸಕ್ತರಾಗಿರುವುದು ವೃತ್ತಿ ಗೌರವವನ್ನು ಸೂಚಿಸುತ್ತದೆ ಎಂದು ಹೇಳಿದರು.

ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಲತಿದೇವಿ ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಷಯಾಧಾರಿತ ತರಬೇತಿಯ ಮುಖ್ಯ ಸಂಯೋಜಕಿ ಸುಮಾ.ಎಸ್., ಸಹಾಯಕ ಸಂಯೋಜಕ ಚಿಕ್ಕಮಗಳೂರಿನ ಡಾ.ಎಂ.ಡಿ.ಸುದರ್ಶನ್, ಇತಿಹಾಸ ವಿಷಯಾಧಾರಿತ ತರಬೇತಿಯ ಮುಖ್ಯ ಸಂಯೋಜಕಿ ಗ್ರೇಸಿ ಕೆ.ಜೆ., ಸಹ ಸಂಯೋಜಕ ಮಂಜುನಾಥ.ಬಿ.ಡಿ, ಶೈಕ್ಷಣಿಕ ಅಭಿವೃದ್ಧಿ ಸಮಿತಿಯ ಸದಸ್ಯ ದಯಾನಂದ, ಸಂಪನ್ಮೂಲ ವ್ಯಕ್ತಿಗಳಾದ ಬಾಸುಮ ಕೊಡಗು, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

ಕೊಕ್ಕರ್ಣೆ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶ್ರೀಧರ ಶೆಟ್ಟಿ ಸ್ವಾಗತಿಸಿದರು. ಎಸ್.ವಿ.ಟಿ ವನಿತಾ ಪ.ಪೂ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು ವಂದಿಸಿದರು. ಉಪನ್ಯಾಸಕ ನಾಗರಾಜ.ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News