ಕಡಬ ಜೇಸಿ ವತಿಯಿಂದ ಬ್ಯಾಂಕ್ ಸಿಬ್ಬಂದಿಗೆ ಸಿಹಿ ಹಂಚಿಕೆ

Update: 2016-11-25 12:05 GMT

ಕಡಬ, ನ, 25: ನೋಟು ರದ್ಧತಿಯ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲಿಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಅವಿರತವಾಗಿ ದುಡಿದ ಬ್ಯಾಂಕ್ ಸಿಬಬ್ಬಿಯನ್ನು ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿಹಿ ತಿಂಡಿ ವಿತರಿಸಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ಕಡಬದ ವಿಜಯ ಬ್ಯಾಂಕ್, ಫೆಡರಲ್ ಬ್ಯಾಂಕ್, ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಿಗೆ ಭ ಏಟಿ ನೀಡಿದ ಜೇಸಿ ಕಾರ್ಯಕರ್ತರು ಬ್ಯಾಂಕ್ ಗ್ರಾಹಕರ ಜತೆಗೂಡಿ ಬ್ಯಾಂಕ್ ಮೆನೇಜರ್ ಹಾಗೂ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೇಸಿಐ ಕಡಬ ಕದಂಬ ಘಟಕದ ನಿಯೋಜಿತ ಅಧ್ಯಕ್ಷ ತಸ್ಲೀಂ ಮರ್ಧಾಳ, ಕೇಂದ್ರ ಸರಕಾರ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ದೇಶದೆಲ್ಲೆಡೆ ಬ್ಯಾಂಕ್‌ಗಳು ಜನಜಂಗುಳಿಯಿಂದ ತುಂಬಿಕೊಂಡು ಬ್ಯಾಂಕ್ ಸಿಬ್ಬಂದಿಗೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಜಾದಿನಗಳಲ್ಲಿ ಕೂಡ ಸಿಬ್ಬಂದಿ ಗ್ರಾಹಕರಿಗೆ ಸೇವೆ ನೀಡಿದ್ದಾರೆ. ಸರಕಾರದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಬ್ಯಾಂಕ್ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಅವಿರತ ಕೆಲಸ, ಜನರ ಪ್ರಶ್ನೆಗಳು, ನಗದು ಕೊರತೆ ಇತ್ಯಾದಿ ಒತ್ತಡದ ಪರಿಸ್ಥಿತಿಯಲ್ಲಿಯೂ ತಾಳ್ಮೆಯಿಂದ ದೇಶಕ್ಕಾಗಿ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಯನ್ನು ಜನರ ಪರವಾಗಿ ಗೌರವಿಸಬೇಕನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ದಲ್ಲಿ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಕಾರ್ಯದರ್ಶಿ ಅಶೋಕ್ ಕುಮಾರ್ ಪಿ., ಜೇಸಿ ಘಟಕದ ಪೂರ್ವಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಫಯಾಝ್ ಕೆನರಾ, ದಿನೇಶ್ ಆಚಾರ್ಯ, ನಿಯೋಜಿತ ಕಾರ್ಯದರ್ಶಿ ದಿವಾಕರ ಮುಂಡಾಳ, ನಿಖಿಲ್ ಶೆಟ್ಟಿ ಕೇಪು, ಕಡಬ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಲ, ಕೋಶಾಧಿಕಾರಿ ಪ್ರವೀಣ್ ರಾಕ್ ಕೊಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News