29ರಂದು ನೋಟು ನಿಷೇಧ: ಸಾಧಕ-ಬಾಧಕ ಕುರಿತು ಉಪನ್ಯಾಸ

Update: 2016-11-25 18:20 GMT

 ಮಂಗಳೂರು, ನ.25: ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ನೋಟು ನಿಷೇಧ- ಸಾಧಕ ಬಾಧಕ ಕುರಿತು ಉಪನ್ಯಾಸ ಕಾರ್ಯಕ್ರಮ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ನ.29ರಂದು ನಡೆಯಲಿದೆ.

ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಕೆ.ಎಸ್.ಬಾಲಚಂದ್ರ ರಾವ್ ಈ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಿ.ಎ.ಎಸ್.ಎಸ್.ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಹ್ಯಾಂಗ್ಯೋ ಐಸ್‌ಕ್ರೀಮ್‌ನ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಲಿದ್ದಾರೆ ಎಂದು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್ ಅಧ್ಯಕ್ಷ ಯು. ರಾಮ ರಾವ್ ತಿಳಿಸಿದರು.

ಸಂಜೆ 5:45ರಿಂದ 6ಗಂಟೆಯವರೆಗೆ ಸಾವಿತ್ರಿ ರಾಮರಾವ್‌ರಿಂದ ಕನ್ನಡ ನಾಡಗೀತೆ ನಡೆಯಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪಿ.ಬಿ.ಸರಳಾಯ, ಸದಸ್ಯರಾದ ಪಿ.ರವೀಂದ್ರ ರಾವ್, ಕೆ.ವಿ.ಸೀತಾರಾಮ್ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ಮಂಜುಳಾ ಪಿ. ಶೆಟ್ಟಿ, ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ತಾರಾನಾಥ್ ಶೆಟ್ಟಿ ಬೋಳಾರ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News