ಮಲೆನಾಡು ಮತ್ತು ಕರಾವಳಿ ಹೆದ್ದಾರಿ ಮುಂದಿನ ಐದು ವರ್ಷಗಳೊಳಗೆ ಪೂರ್ಣ: ಸಚಿವ ಸುಧಾಕರನ್

Update: 2016-11-26 18:00 GMT

ಕಾಸರಗೋಡು, ನ.26: ಕರ್ನಾಟಕ ಗಡಿಭಾಗದ ನಂದಾರಪದವಿನಿಂದ ತಿರುವನಂತಪುರ ತನಕ 1,200 ಕಿ.ಮೀ. ಮಲೆನಾಡು ಮತ್ತು ಕರಾವಳಿ ಹೆದ್ದಾರಿ ಮುಂದಿನ ಐದು ವರ್ಷಗ ಳೊಳಗೆ ಪೂರ್ಣಗೊಳ್ಳಲಿದೆ ಎಂದು ಕೇರಳ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಹೇಳಿದರು.
 ಸೀತಾಂಗೋಳಿ-ವಿದ್ಯಾನಗರ ಮತ್ತು ಉಪ್ಪಳ-ಕನ್ಯಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿದ್ಯಾನಗರದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತ ನಾಡುತ್ತಿದ್ದರು.
ಮಲೆನಾಡು ಮತ್ತು ಕರಾವಳಿ ಹೆದ್ದಾರಿ ನಂದಾರಪದವಿನಿಂದ ಪೈವಳಿಕೆ, 
  ಚೇವಾರ್, ಪೆರ್ಮುದೆ, ಮುಳ್ಳೇರಿಯ ಮೂಲಕ ಹಾದು ಹೋಗಲಿದೆ ಎಂದು ಅವರು ಹೇಳಿದರು. ಉಪ್ಪಳ-ಕನ್ಯಾನ, ಸೀತಾಂಗೋಳಿ- ವಿದ್ಯಾನಗರ ರಸ್ತೆಯನ್ನು 85 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ದೀರ್ಘಾವಧಿ ಬಾಳಿಕೆಯ ರಬ್ಬರ್ ಮಿಶ್ರಿತ ಮತ್ತು ಪ್ಲಾಸ್ಟಿಕ್ ಬಳಸಲಾಗುವುದು. 13 ವರ್ಷ 
ಗಳ ವಾರಂಟಿಯಲ್ಲಿ ರಸ್ತೆ ನಿರ್ಮಿಸ ಲಾಗುವುದು ಎಂದವರು ಹೇಳಿದರು ಚೆರ್ಕಳ ಜಂಕ್ಷನ್ ಮತ್ತು ಕಾಸರಗೋಡು ಪ್ರೆಸ್‌ಕ್ಲಬ್ ಜಂಕ್ಷನ್ ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗು ವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು.
 ಶಾಸಕರಾದ ಪಿ.ಬಿ.ಅಬ್ದುರ್ರಝಾಕ್, ಕೆ.ಕುಂಞಿರಾಮನ್, ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಸದಸ್ಯರಾದ ಕೆ.ಸಬಿತ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಜಿಪಂ ಸದಸ್ಯರಾದ ಮುಮ್ತಾಝ್ ಸಮೀರಾ, ಪಂಚಾಯತ್ ಅಧ್ಯಕ್ಷರಾದ ಮಾಲತಿ ಸುರೇಶ್, ಅರುಣಾ, ಭಾರತಿ, ಜಯಾ ಶೆಟ್ಟಿ, ಶಾಹಿನಾ ಸಲೀಂ ಮೊದ ಲಾದವರು ಉಪಸ್ಥಿತರಿದ್ದರು.
ಜೈಕ್ ಜೋಸೆಫ್ ವರದಿ ಮಂಡಿಸಿ ದರು. ಎಂ.ಪೊನ್ನಮ್ಮ ಸ್ವಾಗತಿಸಿದರು. ಎಂ.ಝುಬೈರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News