ರಾಜ್ಯಾದ್ಯಂತ, ‘ಆಕ್ರೋಶ’, ದಿನದ, ಆಚರಣೆ, ಐವನ್,

Update: 2016-11-26 18:32 GMT

ಮಂಗಳೂರು, ನ.26: ದೇಶದಲ್ಲಿ 1000 ಹಾಗೂ 500 ರೂ. ನೋಟುಗಳನ್ನು ಪೂರ್ವ ತಯಾರಿ ಇಲ್ಲದೆ ಅಮಾನ್ಯ ಮಾಡಿರುವ ಅಸಮರ್ಪಕ ಕ್ರಮದಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಯ ಕಾರಣಕ್ಕಾಗಿ ವಿವಿಧ ಸಂಘಟನೆಗಳು ನ.28ರಂದು ಹಮ್ಮಿಕೊಂಡಿರುವ ಭಾರತ್ ಬಂದ್‌ಗೆ ರಾಜ್ಯ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಬೆಂಬಲಿಸಲಿದೆ. ಅಂದು ವಿವಿಧ ತಾಲೂಕು ಕೇಂದ್ರಗಳಲ್ಲಿ ಆಕ್ರೋಶ್ ದಿನವನ್ನು ಆಚರಿಸಲಿದೆ ಎಂದು ಕೆಪಿಸಿಸಿ ವಕ್ತಾರ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
   ನೋಟು ಅಮಾನ್ಯಗೊಂಡ ಬಳಿಕ ಕಪ್ಪು ಹಣ ಹೊಂದಿರುವ ಎಷ್ಟು ಜನರು ಬ್ಯಾಂಕ್‌ಗೆ ಹಣ ಜಮಾ ಮಾಡಿದ್ದಾರೆ ಎನ್ನುವುದನ್ನು ಪ್ರಧಾನಿ ಬಹಿರಂಗ ಪಡಿಸಲಿ. ಸಾಮಾಜಿಕ ಜಾಲ ತಾಣವನ್ನು ಬಳಸಿಕೊಂಡು ನೋಟು ಅಮಾನ್ಯಗೊಳಿಸಿದ ಕ್ರಮಕ್ಕೆ ಶೇ.94 ಜನರು ಬೆಂಬಲ ನೀಡಿದ್ದಾರೆ ಎಂದು ಪ್ರಚಾರ ಮಾಡಲಾಗಿದೆ. ದೇಶದ ಬಹುತೇಕ ಜನರು ಸರಕಾರದ ಕ್ರಮದಿಂದ ಆಕ್ರೋಶಗೊಂಡಿದ್ದಾರೆ. ನಿಜವಾಗಿ ಎಷ್ಟು ಜನ ನೋಟು ಅಮಾನ್ಯಗೊಳಿಸಿ ಜನರನ್ನು ತೊಂದರೆ ಗೀಡು ಮಾಡಿದ ಕ್ರಮಕ್ಕೆ ಬೆಂಬಲವಾಗಿದ್ದಾರೆ ಎನ್ನುವುದು ಸೋಮವಾರದ ಬಂದ್ ಬಳಿಕ ಬಹಿರಂಗವಾಗಲಿದೆ ಎಂದು ಐವನ್ ಡಿಸೋಜಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳಾದ ನಝೀರ್ ಬಜಾಲ್, ಶರೀಫ್ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಣ ಕಳೆದುಕೊಂಡವರಿಗೆ ತಲಾ ಕೋ.ರೂ. ಪರಿಹಾರಕ್ಕೆ ಆಗ್ರಹ
ನೋಟು ಅಮಾನ್ಯಗೊಂಡ ಬಳಿಕ ಸುಮಾರು 15 ದಿನಗಳಿಂದ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಸರಕಾರ 1 ಕೋ.ರೂ. ಪರಿಹಾರ ಧನ ನೀಡಬೇಕು.


*ಐವನ್ ಡಿಸೋಜಾ,
ವಿಧಾನ ಪರಿಷತ್‌ನ ಮುಖ್ಯ ಸಚೇತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News