ನೋಟು ಅಮಾನ್ಯದಿಂದಾಗಿ ರಿಯಲ್ ಎಸ್ಟೇಟ್‌ ಬೆಲೆ ಅರ್ಧಕ್ಕರ್ಧ ಇಳಿಯಲಿದೆ ಎಂಬ ವದಂತಿ ಬಗ್ಗೆ ಕ್ರೆಡೈ ಏನು ಹೇಳುತ್ತದೆ?

Update: 2016-11-30 15:21 GMT

ಮಂಗಳೂರು, ನ.30: ಕೇಂದ್ರ ಸರಕಾರ 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ನಷ್ಟದಲ್ಲಿದೆ ಮತ್ತು ಮತ್ತು ಜಮೀನಿನ ಬೆಲೆ ಶೇ. 50ರಷ್ಟು ಕಡಿತಗೊಳ್ಳಲಿದೆ ಎಂಬ ಮಾಧ್ಯಮಗಳ ವರದಿ ಕಪೋಲಕಲ್ಪಿತ ಸುಳ್ಳು ಎಂದು ಕ್ರೆಡೈ ಸಂಸ್ಥೆಯ ಅಧ್ಯಕ್ಷ ಡಿ.ಬಿ. ಮೆಹ್ತ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯದಿಂದಾಗಿ ರಿಯಲ್ ಎಸ್ಟೇಟ್‌ಗೆ ಯಾವುದೇ ತೊಂದರೆಯಾಗಿಲ್ಲ. ಮನೆ ಅಥವಾ ಅಪಾರ್ಟ್‌ಮೆಂಟ್‌ಗಳ ಬೆಲೆ ಶೇ. 30ರಷ್ಟು ಇಳಿಯುತ್ತದೆ ಮತ್ತು ಜಿಡಿಪಿ ದರ ಇಳಿಮುಖಗೊಂಡು ನಿರುದ್ಯೋಗ ಸೃಷ್ಟಿಯಾಗಲಿದೆ ಎನ್ನುವುದು ಸರಿಯಲ್ಲ. ನೋಟು ಅಮಾನ್ಯದಿಂದ ತಾತ್ಕಾಲಿಕ ಪರಿಣಾಮ ಬೀರಬಹುದೇ ವಿನ: ಪೂರ್ಣಕಾಲಿಕ ಅಲ್ಲ ಎಂದು ಹೇಳಿದರು.

ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಈ ವಾಸ್ತವನ್ನು ಮರೆಮಾಚಲಾಗುತ್ತಿವೆ. ಗೃಹ ನಿರ್ಮಾಣ ಸಾಲಗಳಿಗೆ ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿಮೆಯಾಗಬಹುದೇ ವಿನ: ಜಮೀನು ಬೆಲೆ ಕಡಿಮೆಯಾಗಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ರೆಡೈನ ಗೌರವ ಕಾರ್ಯದರ್ಶಿ ನವೀನ್ ಕರ್ಡೊಝಾ, ಸದಸ್ಯರಾದ ಎಸ್.ಎಂ.ಹರ್ಷದ್, ವಿಲಿಯಮ್ ಡಿಸೋಜ, ಸುದೀಶ್ ಕರುಣಾಕರನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News