ಎ.ಜೆ.ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ

Update: 2016-12-01 17:00 GMT

ಮಂಗಳೂರು , ಡಿ.1 :   ಎ.ಜೆ.ಆಸ್ಪತ್ರೆ ಮತ್ತು ಸಮುದಾಯ ವೈದ್ಯಕೀಯ ವಿಭಾಗ,ಸಮುದಾಯ ದಂತ ವೈದ್ಯ ವಿಭಾಗ,ಎನ್‌ಎಸ್‌ಎಸ್ ಘಟಕ,ಎಜೈಡಿಎಸ್ ಮಾರ್ಕೆಟಿಂಗ್ ವಿಭಾಗ,  ಎಜೆಎಚ್‌ಆರ್‌ಸಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಗುರುವಾರ ಎ.ಜೆ.ಆಸ್ಪತ್ರೆಯ ಆವರಣದಲ್ಲಿ ಆಚರಿಸಲಾಯಿತು.

  ವಿಶ್ವ ಏಡ್ಸ್ ದಿನದ ಅಂಗವಾಗಿ ‘ ಹಸ್ತಾಕ್ಷರ ಮತ್ತು ಕೆಂಪು ಪಟ್ಟಿ’ಆಂದೋಲನವನ್ನು ನಗರದ ನಾಲ್ಕು ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಮೂಹ ಛಾಯಾಗ್ರಹಣ ಕಾರ್ಯಕ್ರಮದಲ್ಲಿ ವೈದ್ಯರು ಶುಶ್ರೂಷಕಿಯವರು ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿ ವರ್ಗದವರು ಶ್ವೇತ ವಸ್ತ್ರವನ್ನು ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ನೆರೆದವರ ಹಸ್ತದ ಮೇಲೆ ಏಡ್ಸ್ ನಿಯಂತ್ರಣ ಸಂದೇಶ ,ಕರಪತ್ರ ಬಿಡುಗಡೆ ಹಾಗೂ ಎಚ್‌ಐವಿ ಹರಡುವ ಬಗ್ಗೆ ಉಪನ್ಯಾಸ ಕಾರ್ಯಕ್ರ ಹಾಗೂ ಕೆಂಪು ಬಲೂನುಗಳನ್ನು ಹಾರಿ ಬಿಡುವ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

      ಸಮಾರಂಭದಲ್ಲಿ ಎಲ್‌ಎಂಇಟಿ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ,ಎಜೆಎಚ್‌ಆರ್‌ಸಿ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ,ಎ.ಜೆ ಐಎಮ್‌ಎಸ್‌ನ ಮುಖ್ಯಸ್ಥ ಡಾ.ಅಶೋಕ್ ಹೆಗ್ಡೆ,ಅಧೀಕ್ಷಕ ಡಾ.ಎಸ್.ಜಯರಾಮ್,ಆಡಳಿತಾಧಿಕಾರಿ ದಯಾನಂದ ಶೆಟ್ಟಿ,ಎಜೆ ಐಡಿಎಸ್ ಪ್ರಾಂಶುಪಾಲ ಡಾ.ಭರತ್ ಶೆಟ್ಟಿ,ಎಲೈಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಾಂಶುಪಾಲ ಡಾ.ಫ್ರಾನ್ಸಿಸ್ ಮೊಂಟೇರಿಯೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News