ಮುಲ್ಕಿ : ಯುವಕಮಂಡಲದ ವಾರ್ಷಿಕೋತ್ಸವ

Update: 2016-12-06 18:11 GMT

ಮುಲ್ಕಿ, ಡಿ.6: ರಾಜ್ಯ ಸರಕಾರವು ಹಳ್ಳಿಗಳ ಸುಧಾರಣೆಗೆ ಒತ್ತು ನೀಡುತ್ತಿದ್ದು ಗ್ರಾಮಸ್ಥರು ಕೈಜೋಡಿಸಿ ಕೆಲಸ ಮಾಡಿದರೆ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ ಜೈನ್ ಹೇಳಿದರು.

ಅವರು ಮುಲ್ಕಿ ಸಮೀಪದ ಕುಮಾರ ಸ್ವಾಮಿ ಯುವಕಮಂಡಲ ಕಿಲ್ಪಾಡಿ ಇದರ ರಜತ ಸಂಭ್ರಮ ಹಾಗೂ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಮಾರು 10ಲಕ್ಷ ರೂ. ವೆಚ್ಚದಲ್ಲಿ ಕುಮಾರಮಂಗಿಲ ರಸ್ತೆ ಅಭಿವೃದ್ಧಿ, 15 ಕೋಟಿ ರೂ. ವೆಚ್ಚದಲ್ಲಿ ಮುಲ್ಕಿ-ಮೂಡಬಿದಿರೆ ವಿಧಾನಸಭಾಕ್ಷೇತ್ರದ ಆಣೆಕಟ್ಟುಗಳ ಅಭಿವೃದ್ಧಿ ಹಾಗೂ ಜೀರ್ಣೋದ್ದಾರಕ್ಕೆ ಸಿದ್ಧವಾಗಿರುವ ಪುರಾತನ ಧೂಮಾವತಿ ದೈವಸ್ಥಾನ ಕಲ್ಲಾಡಿ ಕ್ಷೇತ್ರದ ಅಬಿವೃದ್ಧಿಗೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಊರಿನ ಅಭಿವೃದ್ಧಿಗೆ ಕುಮಾರಸ್ವಾಮಿ ಯುವಕಮಂಡಲದ ಸಾಧನೆ ಪ್ರಶಂಸನೀಯ ಎಂದು ಹೇಳಿದ ಅವರು, ಶೇಷ್ಠ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಅಭಿನಂದನೀಯ ಎಂದರು.

 ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜೀ ಜಿ.ಪಂ. ಸದಸ್ಯರಾದ ಈಶ್ವರ್ ಕಟೀಲು, ಪ್ರಮೋದ ಕುಮಾರ್,ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ರಾವ್, ಸದಸ್ಯರಾದ ಶರೀಫ್ ಕಿಲ್ಪಾಡಿ, ನಾಗರಾಜ ಕುಲಾಲ್, ಸಾವಿತ್ರಿ, ಕಲ್ಲಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್‌ನ ಮ್ಯಾನೇಜರ್ ಅಶೊಕ್ ಕುಮಾರ್ ಶೆಟ್ಟಿ, ಕುಮಾರಮಂಗಿಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕಿಲ್ಪಾಡಿ ಮದಕದ ನಾಟಿ ವೈದ್ಯ ಲಕ್ಷ್ಮಣ ಶೆಟ್ಟಿಗಾರ್ ಹಾಗೂ ಯಕ್ಷಗಾನ ಕಲಾವಿದ ಅಂಬರೀಷ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News