ಸುರತ್ಕಲ್: ಸಾರ್ವಜನಿಕ ರಸ್ತೆಗೆ ಗುದ್ದಲಿ ಪೂಜೆ

Update: 2016-12-09 18:21 GMT

ಸುರತ್ಕಲ್, ಡಿ.9 :  ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದ ರಾಜೀವ್ ನಗರದಿಂದ ಲಕ್ಷ್ಮೀ ಜನಾರ್ದನ ದೇವಸ್ಥಾನ ಸಂಪರ್ಕಿಸುವ ಸಾರ್ವಜನಿಕ ರಸ್ತೆಗೆ ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದರು.

ಸರಕಾರ ಯಾವುದೇ ಕಾಮಗಾರಿಗಳನ್ನು ನಡೆಸಿದರೂ ಅದು ಸಾರ್ವಜನಿಕರ ಹಣದಿಂದಲೇ ನಡೆಸುತ್ತದೆ. ಆದ್ದರಿಮದ ಸರಕಾರ ಕಲ್ಪಿಸುವ ರಸ್ತೆ, ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ತನ್ನದು ಎಂಬ ನೆಲೆಯಲ್ಲಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

 ಕಾರ್ಯಕ್ರಮದ ನಡುವೆ ಸಚಿವರ ಕಾಲಿಗೆ ಏಕಾಏಕಿ ಎರಗಿದ ಸ್ಥಳಿಯ ಶಾರದಾ ಎಂಬ ಮಹಿಳೆ ತನ್ನ ಮಕ್ಕಳು ತನ್ನಿಂದ ದೂರವಾಗಿದ್ದಾರೆ. ತನ್ನ ಮನೆ ದುರಸ್ತಿಯಾಗಿದೆ. ಅಲ್ಲದೆ, ಪಡಿತರ ಚೀಟಿಯನ್ನು ರದ್ದು ಪಡಿಸಲಾಗಿದೆ. ಮನೆಗೆ ಹಕ್ಕು ಪತ್ರವೂ ನೀಡಿಲ್ಲ. ನನಗೆ ನ್ಯಾಯ ಒದಗಿಸಿ ಕೊಡಿ ಎಂದು ವಿನಂತಿಸಿದರು.

 ಸಭೆಯ ಬಳಿಕ ಶಾರದಾ ಅವರನ್ನು ಕರೆದು ಅಹವಾಲು ಕೇಳಿದ ಸಚಿವ ಅಭಯಚಂದ್ರ ಜೈನ್ ಪಂಚಾಯತ್‌ನ ಅಧಿಕಾರಿಗಳ ಹಾಗೂ ಸ್ಥಳೀಯ ಸದಸ್ಯರನ್ನು ಕರೆದು ಶಾರದಾ ಅವರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸೂಚಿಸಿದರು. ಮತ್ತು 94 ಸಿ ಯ ಅಡಿಯಲ್ಲಿ ಶಾರದಾ ಅವರಿಗೆ ಹಕ್ಕು ಪತ್ರ ಕಲ್ಪಿಸುವಂತೆ ಪಂಚಾಯತ್‌ನ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಕಾರ್ಯಕ್ರಮದಲ್ಲಿ ಇಂಜಿನಿಯರ್, ಗುತ್ತಿಗರದಾರರು, ತಾ.ಪಂ.ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News