ಸರೋಜಿನಿ ಶೆಟ್ಟಿಗೆ ಕನ್ನಡ ಭಾರತಿ ರಂಗ ಪ್ರಶಸ್ತಿ

Update: 2016-12-10 16:03 GMT

ಮಂಗಳೂರು, ಡಿ. 10: ದೆಹಲಿ ಕರ್ನಾಟಕ ಸಂಘ ಕೊಡಮಾಡುವ ಈ ಬಾರಿಯ ದೆಹಲಿ ಕರ್ನಾಟಕ ಸಂಘದ ‘ಕನ್ನಡ ಭಾರತಿರಂಗ ಪ್ರಶಸ್ತಿ’ಗೆ ರಂಗಭೂಮಿಯಲ್ಲಿ ಹೆಸರು ಮಾಡಿರುವ ಸರೋಜಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ದೆಹಲಿ ಕರ್ನಾಟಕ ಸಂಘದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಬೆಂಗಳೂರು ಸಹಯೋಗದೊಂದಿಗೆ ಡಿ.10 ಮತ್ತು 11ರಂದು ನಡೆಯುವ ಎರಡು ದಿನಗಳ ‘ವಿಚಾರಗೋಷ್ಠಿ-ತಾಳಮದ್ದಳೆ-ಯಕ್ಷಗಾನ-ಬಯಲಾಟ’ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಈ ಪ್ರಶಸ್ತಿಯ ಘೋಷಣೆ ಮಾಡಿದರು.

 ಪ್ರಶಸ್ತಿಯು 50,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ, ವಿಮಾನಯಾನದ ಖರ್ಚು ಒಳಗೊಂಡಿರುತ್ತದೆ. ರಂಗಭೂುಯಲ್ಲಿ ಗಣನೀಯ ಸೇವೆ ಮಾಡಿದರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ರಂಗಭೂುಯ ಹಿರಿಯರಾದ ಟಿ.ಎಸ್. ನಾಗಾಭರಣ ಮತ್ತು ಶ್ರೀನಿವಾಸ್ ಜಿ. ಕಪ್ಪಣ್ಣ ಅವರ ಆಯ್ಕೆ ಸಮಿತಿಯು ಸರೋಜಿನಿ ಶೆಟ್ಟಿಯವರ ಹೆಸರನ್ನು ಶಿಫಾರಸು ಮಾಡಿದೆ.

ಮಂಗಳೂರಿನವರಾದ ಸರೋಜಿನಿ ಶೆಟ್ಟಿ ರಂಗ ಪ್ರವೇಶ ಮಾಡಿದ್ದು 1970ರಲ್ಲಿ ಹಾಗೂ ಸಿನಿಮಾರಂಗ ಪ್ರವೇಶ 1975ರಲ್ಲಿ.

ಅಭಿನಯಿಸಿದ ಕನ್ನಡ ಚಲನಚಿತ್ರಗಳು:

ಡಾ.ಶಿವರಾಮ ಕಾರಂತರ ಬಿ..ಕಾರಂತ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಚೋಮನದುಡಿ, ಪುಟ್ಟಣ್ಣಕಣಗಾಲ್ ನಿರ್ದೇಶನದ ಶುಭ ಮಂಗಳ, ಪುಟ್ಟ ಹೆಂಡ್ತಿ, ಮಾತೃ ವಾತ್ಸಲ್ಯ, ಗೋಲಿಬಾರ್, ವಿಷ್ಣುವರ್ಧನ್‌ ಅಭಿನಯದ ಈ ಜೀವ ನಿನಗಾಗಿ, ಕೃಷ್ಣ ನೀ ಬೇಗನೆ ಬಾರೋ, ಶಿವ ಶಂಕರ್‌ ಅಂಬರೀಶ್‌ ಅಭಿನಯದ ಅರ್ಜುನ್, ಹಳ್ಳಿಯಾದರೇನು ಶಿವ,ಚೆಲ್ಲಾಪಿಲ್ಲಿ.

ಅಭಿನಯಿಸಿದ ಕನ್ನಡ ಚಲನಚಿತ್ರದ ಹೊರತಾಗಿ ಅಮಿತಾ ಬಚ್ಚನ್ ಅಭಿನಯದ ಮನಮೋಹನ್‌ದೇಸಾಯಿ ನಿರ್ದೇಶನದ ಹಿಂದಿ ಚಲನಚಿತ್ರ ಗಂಗಾ ಯಮುನಾ ಸರಸ್ವತಿ ಚಿತ್ರದಲ್ಲಿ ಕಿರು ಪಾತ್ರ ಮಾಡುವಂತ ಅವಕಾಶ. ರಾಷ್ಟ್ರ ಪ್ರಶಸ್ತಿ ವಿಜೇತ ಅಡೂರು ಗೋಪಾಲಕೃಷ್ಣನ್ ನಿರ್ದೇಶನದಲ್ಲಿ ಮಮ್ಮುಟಿ ಅಭಿನಯದ ಮಲಯಾಳಂ ಚಲನಚಿತ್ರ ವಿಧೇಯನ್.

ಅಭಿನಯಿಸಿದ ತುಳು ಚಲನಚಿತ್ರಗಳು

ತುಳುನಾಡ ಸಿರಿ ಚಲನ ಚಿತ್ರದಲ್ಲಿ ಸಿರಿಯಾಗಿ ನಾಯಕಿ ಪಾತ್ರ ನಂತರ ಬೊಳ್ಳಿದೋಟ, ಸಂಘಮ ಸಾಕ್ಷಿ, ದಾರೆದ ಸೀರೆ, ಬಂಗಾರ್ ಪಟ್ಲೇರ್, ಸಪ್ಟೆಂಬರ್ 8, ಬದಿ, ಮಾರಿಬಲೆ, ಕಡಲಮಗೆ, ತೆಲಿಕೆದ ಬೊಳ್ಳಿ ಮತ್ತು ರಿಕ್ಷಾ ಡ್ರೈವರ್, ಚಾಲಿಪೋಲಿಲು, ಚಂಡಿಕೋರಿ ಗಳಲ್ಲಿ ಅಭಿನಯ. ಬಿಡುಗಡೆಯಾಗಲಿರುವ ಜೈ ತುಳುನಾಡ್ ಸಿನಿಮಾದಲ್ಲಿ ಅಭಿನಯ.

ಅಭಿನಯಿಸಿದ ತುಳು ನಾಟಕಗಳು

2000 ಪ್ರದರ್ಶನಕ್ಕೂ ಮೇಲ್ಪಟ್ಟು ಮುಖ್ಯವಾದವುಗಳು. ಕಾಸರಗೋಡ್‌ ಚಿನ್ನ ನಿರ್ದೇಶನದ ನಿನ್ನ ಮೋಕೆದ, ಬಂಗಾರ ಬಾಲೆ, ಕಂಡನಿ ಬೊಡೆದಿ, ಮುಂಬೈ ಷಣ್ಮುಕಾನಂದ ಹಾಲ್‌ನಲ್ಲಿ ಪ್ರದರ್ಶನಗೊಂಡ ಒರಿಯೆ ಮಗೆ ಒರಿಯೆ, ಪೊರ್ತು ಕಂತಂಡ್, ಶ್ರೇಷ್ಟ ನಟಿ ಪ್ರಶಸ್ತಿ ಪಡೆದ ನಂಬುಲೆ ನಂಬಾದ್‌ಕೊರ್ಪೆ, ಗಂಟೆ ಏತಾಂಡ್, ಈರ್‌ದೂರ, ಇತ್ತೀಚಿಗೆ ದುಬೈ, ಮುಂಬೈ ಹಾಗೂ ಕರ್ನಾಟಕದ ಹಲವಾರು ಕಡೆಗಳಲ್ಲಿ ಅದ್ಧೂರಿ ಪ್ರದರ್ಶನ ಕಂಡು ಜನಪ್ರಿಯತೆ ಗಳಿಸಿದ ಪೌರಾಣಿಕ ‘ಕಟೀಲ್‌ದಪ್ಪೆ ಉಳ್ಳಾಲ್ದಿ’ ನಾಟಕದಲ್ಲಿ ಶ್ರೀದೇವಿಯಾಗಿ ಪಾತ್ರ, ಮಹಿಷಾ ಮರ್ದಿನಿ ನಾಟಕದಲ್ಲಿ ಶ್ರೀದೇವಿಯಾಗಿ ಪಾತ್ರ, ಸುಮಾರು 5000 ಕ್ಕೂ ಮಿಕ್ಕಿ ಪ್ರದರ್ಶನಗಳು-ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ವಿದೇಶದಲ್ಲಿ ಅಭಿನಯ: ಅಬುಧಾಬಿ, ಮಸ್ಕತ್, ದುಬೈ, ಬಹ್ರೈನ್, ಮುಂಬೈ, ಚೆನ್ನೈ, ಮೈಸೂರು, ಬೆಳಗಾವಿ, ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ, ಕರ್ನಾಟಕ ಬೆಂಗಳೂರು ಮೊದಲ್ಗೊಂಡು ಹಲವಾರು ಕಡೆ ರಂಗಭೂಮಿಯಲ್ಲಿ ಅಭಿನಯ.

ಮಂಗಳೂರು ಆಕಾಶವಾಣಿಯ ‘ಎ’ ಗ್ರೇಡ್‌ಕಲಾವಿದೆ ಮತ್ತು ಆಕಾಶವಾಣಿಯ ನಾಟಕಗಳು: ಟಿಂಗರ ಬುಡ್ಡಣ್ಣ, ಲಂಕೇಶ್‌ರವರ ಸಿದ್ಧತೆ, ಆಶಾಡದ ಒಂದು ದಿನ, ಕೆ.ಟಿ.ಶ್ರೀಧರ್‌ರವರ ರಾಷ್ಟ್ರೀಯ ಹೆದ್ದಾರಿ ಡಿವಿಷನ್‌ನಲ್ಲಿ ಸಾವು, ಮೂಕ ಹಕ್ಕಿ, ಕಡಲ ಹಕ್ಕಿ, ಪ್ರವೀಣ್‌ರೋಯ್, ಭಗವದಜೋಕಿಯಾ, ಕಾಳಿದಾಸ ಇತ್ಯಾದಿ.

ಕಿರುತೆರೆಚಿತ್ರ: ಬರವುದ ಬಂಡಸಾಲೆ (ಮಕ್ಕಳ ಚಿತ್ರ), ಡಾ.ಶಿವರಾಮ ಕಾರಂತರ ಸರಸಮ್ಮನ ಸಮಾಧಿ, ಚಿರಸ್ಮರಣೆ, ನಾಗಾಭರಣ ನಿರ್ದೇಶನದ ಜೀವನ್ಮುಖಿ, ವಿಜಯಟೆಂಡೂಲ್ಕರ್‌ರವರ ಇರುಳು, ಶೇಕ್ಸ್‌ಪಿಯರ್‌ರವ ಒತೆಲೋದಲಿ ಡೆಸ್ಟಿಮೋನ ಪಾತ್ರ, ಹಲವಾರು ಸಿನಿಮಾಗಳಿಗೆ ಕಂಠದಾನ.

ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು: ದಕ್ಷಯಜ್ಞ, ಕುಡರಿರಾಮೆ, ಮಹಿಮೆದ ಮತ್ಸ್ಯೇಂದ್ರ, ಬೆಳವಡಿ ಮಲ್ಲಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ವೀರಎಚ್ಚಮ್ಮ ನಾಯ್ಕ, ಭಕ್ತ ಪ್ರಹ್ಲಾದ, ಶನಿ ಪ್ರಭಾವ, ಭೂಕೈಲಾಸ, ಬಬ್ರುವಾಹನ, ಇತ್ಯಾದಿ ಮುಖ್ಯವಾದವುಗಳು.

ಪಡೆದ ಪ್ರಶಸ್ತಿ ಮತ್ತು ಸನ್ಮಾನಗಳು:

1984ರ ಪ್ರಪ್ರಥಮ ವಿಶ್ವಮೇಳ ಸಮ್ಮೇಳನದಲ್ಲಿ ಪೂಜ್ಯ ವಿರೇಂದ್ರೆ ಹೆಗ್ಗಡೆ ದಂಪತಿಯಿಂದ ಭಾರತ ಸರಕಾರದಿಂದ ಸಹಾಯಕ ಗೃಹ ಮಂತ್ರಿಯಾಗಿದ್ದ ಪಿ.ಎಂ.ಸಯೀದ್ ಅವರ ಉಪಸ್ಥಿತಿಯಲ್ಲಿ ಸನ್ಮಾನ.

ಅಬ್ಬಕ ಉತ್ಸವ ಸಮಿತಿಯವರಿಂದ ವೀರರಾಣಿ ಅಬ್ಬಕ್ಕ ಪುರಸ್ಕಾರ.

ತುಳುರಂಗ ಭೂಮಿಕಲಾವಿದರ ಒಕ್ಕೂಟದಿಂದ ತೌಳವ ಪ್ರಶಸಿತಿ

2010 ಕೃಷ್ಣಮೂರ್ತಿ ಸ್ಮಾರಕ ಪ್ರಶಸ್ತಿ

2011 ಶಿವ ಶಕ್ತಿ ತರುಣ ವೃಂದದಿಂದ ಕಲಾ ಶಕ್ತಿ ಬಿರುದು ಸನ್ಮಾನ

ಸುವರ್ಣ ಮಹೋತ್ಸವದ ಅಂಗವಾಗಿ ಎಂ.ವೀರಪ್ಪ ಮೊಯ್ಲಿಯವರಿಂದ ಸನ್ಮಾನ

ತುಳುವರೆ ಕೂಟ ಬಿಸು ಪರ್ಬ ಇವರ ವತಿಯಿಂದ ಅಭಿನಯರತ್ನ ಬಿರುದು ಸನ್ಮಾನ

ಮಂಗಳೂರು ಬಂಟರ ಮಾತೃ ಸಂಘದಿಂದ ಸನ್ಮಾನ

 ಮುಂಬೈ ಕುರ್ಲಾ ಬಂಟರ ಸಂಘದಿಂದ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಿಭಾಗದಿಂದ ಸನ್ಮಾನ

2011 ಮಂಗಳೂರು ವಿಮಾನ ನಿಲ್ದಾಣದ ವಜ್ರ ಮಹೋತ್ಸವದ ಸಲುವಾಗಿ ನಡೆದ ಸಾಂಸ್ಕೃತಿಕ ಕಲೋತ್ಸವದಲ್ಲಿ ಶ್ರೀ ಕಟೀಲದಪ್ಪೆ ಉಳ್ಳಾಲ್ದಿ ನಾಟಕದಲ್ಲಿ ಶ್ರೀದೇವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ.

2011 ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ವತಿಯಿಂದ ‘ಕಲಾ ಕೌಸ್ತುಬ’ ಬಿರುದು ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಲೇಖಕಿ ವಾಚಕಿಯರ ಸಂಘದಿಂದ ಯಶಸ್ವಿ ಅಭಿನೇತ್ರಿ ಸನ್ಮಾನ

2012 ಸೌಜನ್ಯ ಮಹಿಳಾ ಮಂಡಲದ ಸನ್ಮಾನ

2012 ಶ್ರೀ ವಿದ್ಯಾಕ್ಷೇತ್ರದಿಂದ ತುಳಸಿ ಸನ್ಮಾನ.

ಮಹಿಳಾ ದಿನಾಚರಣೆಯ ಅಂಗವಾಗಿ ಬಿಗ್‌ಎಫ್‌ಎಮ್‌ನಲ್ಲಿ ಬಿಗ್ ಕನ್ನಡತಿ ಅವಾರ್ಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News