ಶೀಘ್ರದಲ್ಲಿ ಮನಪಾ ಮಿನಿ ಪುರಭವನ-ಮೇಯರ್ ಹರಿನಾಥ್

Update: 2016-12-11 09:50 GMT

ಮಂಗಳೂರು,ಡಿ.11: ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ  ಮಿನಿ ಪುರಭವನವನ್ನು  ಜನವರಿ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಹರಿನಾಥ್ ತಿಳಿಸಿದರು.

ನಗರದ ನೆಹರೂ ಮೈದಾನದ ದಲ್ಲಿ  ಹಮ್ಮಿಕೊಂಡ  ಪತ್ರಕರ್ತರ ಕ್ರೀಡಾ ಕೂಟದ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ  ಮಾತನಾಡುತ್ತಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಪುರಭವನದ ನವೀಕರಣದ ಬಳಿಕ ಸ್ಥಳೀಯ  ಕಾರ್ಯಕ್ರಮಗಳಿಗೆ ಅನಾನುಕೂಲವಾಗಿರುವ ಹಿನ್ನೆಲೆಯಲ್ಲಿ  ಸಾರ್ವಜನಿಕರಿಗೆ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಮಿನಿ ಪುರಭವನವನ್ನು  ನಿರ್ಮಿಸಅಲು  ತೀರ್ಮಾನಿಸಿ ಕ್ರಮ ಕೈ ಗೊಳ್ಳಲಾಗಿದೆ ಶೀಘ್ರದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಮಂಗಳೂರಿಗೆ ಕುಡಿಯುವ ನೀರು ಸರಬರಾಜಾಗಲು  ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟು ಜನವರಿ ಅಂತ್ಯದೊಳಗೆ  ಪೂರ್ಣಗೊಳ್ಳಲಿದೆ. ಮಂಗಳೂರು  ಮಹಾನಗರ  ಪಾಲಿಕೆಯ ವ್ಯಾಪ್ತಿಯಲ್ಲಿನ ಎಲ್ಲಾ ಫುಟ್ಪಾತ್ಗಳನ್ನು  ನಿರ್ಮಿಸುವ ಹಾಗೂ ಅಭಿವೃದ್ಧಿ ಪಡಿಸುವ ಸುಮಾರು 500 ಕೋಟಿ ರೂಪಾಯಿಗಳ ಯೋಜನೆ  ಮೂರು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ಹರಿನಾಥ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News